...

8 views

ಏನಾಗಬೇಕು?
ಏನಾಗಬೇಕು?


ಕಾಯಬೇಡ ನೀ ಯಾರಿಗಾಗಿ,
ಯಾತಕ್ಕಾಗಿಯೂ ಕಾದು ನೋವ ಪಡಬೇಡ.
ನೀ ಕಾಯುವುದರ ಮೇಲೆ ನಿನ್ನದೇ ಹೆಸರಿದ್ದರೆ,
ನೀ ದೂರ ಸರಿದರು, ನೀ ದೂರ ಸರಿಸಿದರು ಅದು ಬಂದು ಸೇರುವುದು ನಿನ್ನ.

ನೋಡಬೇಡ ನೀ ಶೂನ್ಯದತ್ತ, ಆಳವಾಗಿ ನೋಡಿ ನೋವ ಹಿಮ್ಮಡಿಸಿಕೊಳ್ಳದಿರು.
ನೋಡಿ ನೋಡಿ ಹೃದಯದ ಭಾರವ ಹೆಚ್ಚಿಸುವ ಬದಲಾಗಿ,
ಬದಲಾಯಿಸು ನೀ ಅದನ್ನು ನೋಡುವ ವಿಧಾನವನು.

ಆಡದಿರು ನೀ ಮನೆಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು, ಆಡಿ ನೀ ಎಲ್ಲರಿಗು ದೂರಾಗದಿರು.
ಮನಸ್ಸು ನೋಯಿಸುವ ಹಲವು ಮಾತುಗಳನ್ನು ಆಡುವ ಬದಲಾಗಿ,
ನೀ ಮಾತಾಡದೆ ನಿನ್ನ ಮೌನವನೆ ಮಾತಾಗಿಸು.

ಕೇಳದಿರು ಮನಸ್ಸನ್ನು ಚುಚ್ಚುವ ಮಾತುಗಳನ್ನು, ಇತರರನ್ನು ನಿಂದಿಸುವ ಮಾತುಗಳನ್ನು ಕೇಳದಿರು ನೀ.
ನಿಜವೋ, ಸುಳ್ಳೋ ತಿಳಿಯದ ಮಾತುಗಳನ್ನು ಕೇಳಿಸಿಕೊಂಡು ನಿನ್ನಲ್ಲಿ ವಿಷವ ತುಂಬಿಕೊಳ್ಳದಿರು, ನಿನ್ನ ಮನದ ಸತ್ಯಮಾತು ಕೇಳಬಲ್ಲ ನಿಶ್ಶಬ್ದದ ಧ್ವನಿಯ ನೀ ಕೇಳುವಂತಾಗು.

ಸ್ಥಿರವಾಗು ನೀ ಸ್ಥಿರಚಿತ್ತದವಳಾಗು, ಚಿಂತೆಯನ್ನು, ಚಾಂಚಲ್ಯವನ್ನು ದೂರ ಸರಿಸುವ ದೃಢಚಿತ್ತದವಳಾಗು,
ಆಳಾಗದೆ ನೀ ಅರಸಾಗು ನಿನ್ನ ಚಾಂಚಲ್ಯಕ್ಕೆ, ಅರಿಷಡ್ವರ್ಗಗಳನ್ನು ಮೆಟ್ಟಿನಿಲ್ಲುವ ಧೀರೆಯಾಗು.

© All Rights Reserved