...

11 views

ಮೌನದ ಸಂಭಾಷಣೆ..
ಎಲ್ಲರ ನಡುವೆ ನಾವು ಇರುವಾಗ.
ನನ್ನ ನಿನ್ನ ನಡುವೆ ನಡುವೆ ಮೌನದ ಸಂಭಾಷಣೆ.
ಕಣ್ಣು ಕಣ್ಣಲ್ಲೇ ಮಾತು ನಡೆಯುವಾಗ.
ಬೇಕೆ ಪದಗಳಲ್ಲಿ ಭಾವನೆಗಳ ವಿಶ್ಲೇಷಣೆ....

ನನ್ನ ಹುಡಕುವ ಆ ನಿನ್ನ ಕಣ್ಣೋಟವೇ ಚೆನ್ನ.
ಹುಡುಗಾಟದ ಮಾತು ನೋಡದೆ ಬಲು ಚಂದ.
ಬರಿ ಉಸಿರಾಟದಿಂದಲೇ ನಿನ್ನ ಚಿತ್ರ ಅರಿವೇನು ನಲ್ಲೆ
ಹೇಳದೆ ಕೇಳುವ ಮಾತುಗಳು ಚಂದ....

ನನ್ನ ಕಿರುಬೆರಳು ಹಿಡಿದು ನಡೆಯುವ ನಿನ್ನ
ನಿನ್ನ ಕಣ್ಣಲಿ ನಾ ಕಾಣುವ ನಾಚಿಕೆಯೂ ಚೆನ್ನ.
ಕಾಲಿನ ಬೆರಳಲ್ಲಿ ನೆಲ ಗೀಚುವ ನಿನ್ನ
ನಿನ್ನ ನಾಚಿಕೆ ನಗುವನ್ನು ನೋಡುವುದು ಬಲು ಚೆನ್ನ.....

ನೀನೇ ನನ್ನ ಮನದ ಅರಗಿಣಿಯೇ ಚಿನ್ನ..❤️❤️

ನಿನ್ನೊಂದಿಗೆ ನನ್ನ ಬರಹಗಳ ಪಯಣ....

ಇಂತೀ ನಿನ್ನವ..❤️❤️

© All Rights Reserved