...

2 views

*ಪ್ರೇಮದ ಹಣತೆ*



ಕಾರಿರುಳು ಹಬ್ಬಿಹ ಬಾಳಿನ ಹಾದಿಗೆ
ಒಲವೇ ನೀನಾಗು ಬಾ ಹೊಂದೀವಿಗೆ
ಜೋಪಡಿಯೇ ಇರಲಿ ಅರಮನೆ ಕಟ್ಟಲಿ
ಹೃದಯದಲ್ಲಿ ಒಲವ ದೀಪ ಬೆಳಗುತಿರಲಿ

ಹೊಸ ಬಟ್ಟೆ ಬಂಗಾರದೊಡವೆ ಆಸೆಯಿಲ್ಲ
ಎಲ್ಲದಕ್ಕೂ ಮಿಗಿಲು ಜಗದಿ ನಿನ್ನ ಪ್ರೀತಿ ನಲ್ಲ
ಹೊತ್ತಿಸಿಹೆ ನಾನು ಪ್ರೇಮದ ಭಾವನೆಗಳ ಬತ್ತಿ
ನಮ್ಮೊಂದಿಗೆ ಪ್ರಜ್ವಲಿಸಲಿ ಸದಾ ಪ್ರೀತಿ ಹಣತಿ

ಪ್ರತಿ ದಿನ ನಾನು ಕಂಡ ಇರುಳ ಕನಸೆಲ್ಲವೂ
ಕಣ್ಣು ತೆರೆಯುವಷ್ಟರಲ್ಲಿ ನನಸೇ ಆಗುವವು
ಎಲ್ಲದಕ್ಕೂ ಕಾರಣವೇ ಗೆಳೆಯ ನಿನ್ನೊಲವು
ನೀನು ಜೊತೆಗಿದ್ದರೆ ಸೋಲಿಗೂ ಕ್ಷಣ ಮರೆವು

✍️ ಸೂಗಮ್ಮ ಡಿ ಪಾಟೀಲ್
ಉತ್ನಾಳ್