ಹೆಣ್ಣು ಅಬಲೆಯಲ್ಲ
ಅಂಧಕಾರದ ಮನದಲ್ಲಿ ಬದುಕಿದಳು
ಹುಡುಕಿದರೂ ಸಿಗಲಿಲ್ಲ ಕಿಂಚಿತ್ತು ಬೆಳಕು
ಸತ್ಯಕ್ಕೆ ಬೆಲೆಯಿಲ್ಲ, ನ್ಯಾಯದ ಸುಳಿವಿಲ್ಲ
ನರಕವಾಗುತ್ತು ಆ ಒಂದು ಕಾಲ...
ಬದುಕಿನ ಪಯಣವು ನಿಲ್ಲದು ಎಂದೆಂಬ
ಕಟುಸತ್ಯ ಮನದಲ್ಲಿ ಅಚ್ಚಳೆಯಿತು
ಹೊಸತಿರುವು ಅನಿವಾರ್ಯ ಬಾಳಲ್ಲಿ ಎಂದು
ಧೈರ್ಯದಿ ಎದುರಿಸಲು ಮುಂದಾದಳು...
ನಿರ್ಧರಿಸಿ ನಿಂತಳು ಭವಿಷ್ಯದ ಹೋರಾಟಕೆ
ಪಣತೊಟ್ಟು ಬಿಟ್ಟಳು ನಡೆವ ಸಮರಕೆ
ಹೆಣ್ಣೆಂದು ಅಬಲೆಯಲ್ಲ ಸರಿಸಮ ಗಂಡಿಗೆ
ನಿರೂಪಿಸಲು ಬೇಕಿಲ್ಲ ಯಾವುದೇ ಪುರಾವೆ...
ಹೊಸ ಜಗವ ಸೃಷ್ಟಿಸಲು ಹೊಸದಾರಿ ಹುಡುಕಿದಳು
ಛಲದಿಂದ ಗೆಲ್ಲಲು ಸಿದ್ದಳಾದಳು
ಹೆಣ್ಣು ಕೀಳೆಂಬ ಭಾವನೆಯ ಬದಲಿಸಿ
ದೇಶಕ್ಕೆ ಮಾದರಿ ಹೆಣ್ಣೆಂದು ತಿಳಿಸಿದಳು...
ಬೇಕಿಲ್ಲ ಸ್ತ್ರೀ ಕುಲಕೆ ಯಾವುದೇ ಸಹಾನುಭೂತಿ
ಸಮಾನತೆಯ ಹಕ್ಕು ಕೊಟ್ಟರೆ ಸಾಕು.....
ಹೆಣ್ಣೆಂದು ಸಹಿಸಳು ಅವಳ ಗೌರವದ ಧಕ್ಕೆ
ಅವಳು ಮುನಿದರೆ ಉಳಿಯುವುದುಈ ಜಗತ್ತೇ...???
ಹೆಣ್ಣನ್ನು ಅವಮಾನಿಸದಿರಿ, ಹೆಣ್ಣ ಕುಲವ ಗೌರವಿಸಿ🙏🙏🙏🙏🙏
#kannadaquotes #respectwomen #manuthoughts #equality #society #ಹೆಣ್ಣುಅಬಲೆಯಲ್ಲಾ ಸಬಲೆ
© ✍🏻ಮನು (Manu )
ಹುಡುಕಿದರೂ ಸಿಗಲಿಲ್ಲ ಕಿಂಚಿತ್ತು ಬೆಳಕು
ಸತ್ಯಕ್ಕೆ ಬೆಲೆಯಿಲ್ಲ, ನ್ಯಾಯದ ಸುಳಿವಿಲ್ಲ
ನರಕವಾಗುತ್ತು ಆ ಒಂದು ಕಾಲ...
ಬದುಕಿನ ಪಯಣವು ನಿಲ್ಲದು ಎಂದೆಂಬ
ಕಟುಸತ್ಯ ಮನದಲ್ಲಿ ಅಚ್ಚಳೆಯಿತು
ಹೊಸತಿರುವು ಅನಿವಾರ್ಯ ಬಾಳಲ್ಲಿ ಎಂದು
ಧೈರ್ಯದಿ ಎದುರಿಸಲು ಮುಂದಾದಳು...
ನಿರ್ಧರಿಸಿ ನಿಂತಳು ಭವಿಷ್ಯದ ಹೋರಾಟಕೆ
ಪಣತೊಟ್ಟು ಬಿಟ್ಟಳು ನಡೆವ ಸಮರಕೆ
ಹೆಣ್ಣೆಂದು ಅಬಲೆಯಲ್ಲ ಸರಿಸಮ ಗಂಡಿಗೆ
ನಿರೂಪಿಸಲು ಬೇಕಿಲ್ಲ ಯಾವುದೇ ಪುರಾವೆ...
ಹೊಸ ಜಗವ ಸೃಷ್ಟಿಸಲು ಹೊಸದಾರಿ ಹುಡುಕಿದಳು
ಛಲದಿಂದ ಗೆಲ್ಲಲು ಸಿದ್ದಳಾದಳು
ಹೆಣ್ಣು ಕೀಳೆಂಬ ಭಾವನೆಯ ಬದಲಿಸಿ
ದೇಶಕ್ಕೆ ಮಾದರಿ ಹೆಣ್ಣೆಂದು ತಿಳಿಸಿದಳು...
ಬೇಕಿಲ್ಲ ಸ್ತ್ರೀ ಕುಲಕೆ ಯಾವುದೇ ಸಹಾನುಭೂತಿ
ಸಮಾನತೆಯ ಹಕ್ಕು ಕೊಟ್ಟರೆ ಸಾಕು.....
ಹೆಣ್ಣೆಂದು ಸಹಿಸಳು ಅವಳ ಗೌರವದ ಧಕ್ಕೆ
ಅವಳು ಮುನಿದರೆ ಉಳಿಯುವುದುಈ ಜಗತ್ತೇ...???
ಹೆಣ್ಣನ್ನು ಅವಮಾನಿಸದಿರಿ, ಹೆಣ್ಣ ಕುಲವ ಗೌರವಿಸಿ🙏🙏🙏🙏🙏
#kannadaquotes #respectwomen #manuthoughts #equality #society #ಹೆಣ್ಣುಅಬಲೆಯಲ್ಲಾ ಸಬಲೆ
© ✍🏻ಮನು (Manu )