...

7 views

ಬದುಕಿನ ಪಯಣ
ತುಸು ಕಾಡನಿದ್ರೆ ಜಾರಿಹೋಗಿ ಸೂರ್ಯನ..ಉದಯ ಮರೆತುಹೋಗಿ
ಮಂಜಿನ ಮಸುಕು ಮೇಲೆ ತಾಗಿ
ಕಣ್ತೆರೆಯುವ ವೇಳೆ ಜಗವ ಗೆಲ್ಲುವ ಕನಸು
ಮಾಯವಾಯಿತೇ.....

ಕಾರ್ಯಗತರಾದ ಜನರ ಕಂಡು
ಕೂಗುತಿರುವ ದನಕರುಗಳ ಹಿಂಡು
ಸತ್ತಂತಿರುವ ಕಂಗಳು ಪ್ರಕೃತಿಯ ಸವಿಯ ಉಂಡು.
ನಿತ್ಯ ಪರಿಪಾಟದ ವೈಖರಿಯಲಿ ಮುಂದೆ
ಸಾಗಲು ದಿಕ್ಕು ದೋಚದಾಯಿತೇ....

ಏನೋ ತಿಳಿಯದಿ ನಯನ....
ಮನಸೇ ತೋರು ನೀ ಬದುಕಿನ ಪಯಣ...
ಓ ಮನಸೇ ತೋರು ಬದುಕಿನ ಪಯಣ....

ಸಾಗುವುದೆಲ್ಲಿ? ಜಂಜಾಟದ ಬೆಟ್ಟಗುಡ್ಡಗಳು..
ತೋರದಿಹುದಿಲ್ಲಿ ಪ್ರತಿ ಹೆಜ್ಜೆಯಲಿ ಎದುರಾಗುವ ಕಲ್ಲು ಮುಳ್ಳುಗಳು....
ಕಣ್ಣಿಗೆಟುಕುವ ಶ್ರಮದ ಜ್ವಾಲೆ ಗಳು....

ಜಗವ ಗೆಲ್ಲುವ ಆಟವ ಕಂಡೆ ನಾ ಸುಮ್ಮನೆ ಕನಸಿನಲಿ
ಸಾಗದಿ ಪಯಣ ಎದುರಾಗುವ ಕಷ್ಟಕರಗಳು ನೈಜ ಜೀವನದಲಿ.

ಏನೋ ತಿಳಿಯದಿ ನಯನ....
ತುಸು ತೋರು ನೀ ಬದುಕಿನ ಪಯಣ
ಓ ಮನಸೇ ತೋರು ನೀ ಬದುಕಿನ ಪಯಣ......