...

6 views

ಉಳುಮೆಯ ಉರಿ
ಉಳುವವನೀತ, ಉಳ್ಳವನಲ್ಲ.
ಉದಕ, ಊಟ, ಉತ್ತರೀಯಗಳಿಲ್ಲ.

ಉರ್ವರೆಯಿದ್ದರೂ ಉಪಜೀವಿಯಾದ,
ಉಪಕರಣವಿಲ್ಲ, ಉತ್ಪನ್ನವಿಲ್ಲ,
ಉದ್ದರಿಯ ಊಟವು ಉದರದಲ್ಲಿ.
ಉರ್ವಿಯು ಉಪೇಕ್ಷಿಸಿತೆ ಉರ್ವೀಜವ?!

ಉಗಿಬಂಡಿಗೆ ಉದಕವಿಲ್ಲದಿರೆಂತು?
ಉತ್ಪಾದಕನಿಗೆ ಉಪವಾಸವೇ?!
ಉಳುಕು ಉಲ್ಬಣಿಸಿ ಉರುಳಾಯಿತೆ?...