...

12 views

ಪ್ರೀತಿಯ ಕ್ಯಾಮರಾ
ಪ್ರೀತಿಯ ಕ್ಯಾಮರಾವೆ ನಿನ್ನ
ಬಣ್ಣಿಸಲೇ ನಾ ಬಣ್ಣ-ಬಣ್ಣವಾಗಿ|

ಪ್ರೀತಿಯ ಕ್ಯಾಮರಾವೆ ನಿನ್ನ
ವರ್ಣಿಸಲೇ ನಾ ವರ್ಣರಂಜಿತವಾಗಿ||

ಪ್ರೀತಿಯ ಕ್ಯಾಮರಾವೆ ನಿನ್ನ
ಸೆರೆಹಿಡಿವ ಕಣ್ಣಿಗೆ ನಾ ಮನಸೊತೆನೇನು,
ಮನಸೋತು ನಾ ಶರಣಾದೆನೇನು ಮೌನಿಯಾಗಿ|||

ಪ್ರೀತಿಯ ಕ್ಯಾಮರಾವೆ ನೀ
ನನ್ನ ಮನಸ್ಸಿನ ಕನ್ನಡಿಯಂತೆ|

ಪ್ರೀತಿಯ ಕ್ಯಾಮರಾವೆ ನೀ
ನನ್ನ ಕನಸ್ಸಿನ ಕಣ್ಮಣಿಯಂತೆ||


ಪ್ರೀತಿಯ ಕ್ಯಾಮರಾವೆ ನೀ
ನನ್ನ ಭಾವನೆಗಳ ಭವ್ಯತೆಯು
ವಿಜೃಂಬಿಸಲು ತರನಾತರ ಕಂಗೊಳಿಸುವಂತೆ ಮಾಡುವ ಆ ನಿನ್ನ ಕಣ್ಣಿಗೆ ನನ್ನದೊಂದು ನಮನ🙏.

© Shree(🤗⭐)