...

7 views

ನಾ ಮಾಡಲಾರೆ ಕಾಲಹರಣ
ಕಲಹವಿದ್ದರೆ ಒಲವೆಲ್ಲಿ
ಚೆಲುವೆ ಇಲ್ಲಿ ಕೇಳು
ಕಾಲಹರಣ ಮಾಡಲು
ಸಲುಗೆ ಮಾಡಲಾರೆ..

ಸೋಲಿನೊಳಗೆ ನನ್ನದು ಮೊದಲ ಪಂಕ್ತಿ
ಗೇಲಿ ಮಾಡಬೇಡ
ಸಾಲು ಸಾಲು ಸೋಲಿಗೆ ನನ್ನ
ಗೆಲುವನ್ನೆ ಸುಲಿಗೆ ನೀಡಿರುವೆ..

ಗಟ್ಟಿಯಾಗಿದೆ ಒಲವು ವಜ್ರದಂತೆ
ತಟ್ಟಿ ಹೇಳುವೆ ನಾ ಎದೆಯ
ಮೊಟ್ಟೆ ಹಾಕಿವೆ ನಲ್ಲೆ ನೂರಾಸೆಗಳು
ಬೆಟ್ಟದಂತಿರಬೇಡ ಮೌನಿಯಾಗಿ..

ಎರಡು ಕೈ ಸೇರಿದರೆ ತಾನೆ ಚಪ್ಪಾಳೆ
ಬೆರೆತು ಬಾಳಿದರೆ ತಾನೆ ಬಾಳು
ದಾರಿಯೊಳಗಿನ ಮುಳ್ಳಿಗೇಕೆ ಭಯ
ಸೇರಿ ದಡ ಮುಟ್ಟಲು ಒಲವೊಂದೆ ಅಭಯ.


*ರಮೇಶ್ ಹಡಪದ*