...

7 views

*ಸಹಜ*
ಸಹಜ ಬದುಕಿನಲಿ ಸೋಲು
ಸಹಜ ಬದುಕಿನಲಿ ಗೋಳು
ಸಹಜವೇ ಆದರೂ ಶಾಶ್ವತವಲ್ಲ ಮನುಜ

ಸಹಜವಿಲ್ಲಿ ನಿನಗೆ ಅವಮಾನ
ಸಹಜವಿಲ್ಲಿ ನಿನಗೆ ಸನ್ಮಾನ
ಎರಡೂ ಅನುಭವವೇ ಮನುಜ

ಸಹಜವಿಲ್ಲಿ ಅಸೂಯೆ ದ್ವೇಷ
ಸಹಜವಿಲ್ಲಿ ರೋಷಾವೇಷ
ತಡೆಯದಿರೆ ನಿನ್ನ ನಾಶವೇ ಮನುಜ

ಸಹಜವಾಗಿ ಸರಳವಾಗಿ
ಎಲ್ಲರೊಳೊಂದಾಗಿ ಬದುಕಿದರೆ
ನಿನ್ನ ಜೀವನ ಸದಾ ಸುಂದರ ಮನುಜ


© ಭಾರ್ಗವಿ ವರ್ಧನ್*(ಭಾವ)*✍🏻