...

1 views

ಅಮ್ಮ
ಅಮ್ಮ

ಕಣ್ಣು ತೆರೆಯದೇ ಹೋದೆ ಕೊನೆಗೆ
ಕಾಣದೇ ಎಲ್ಲೋ ಮರೆಯಾದ ಗಳಿಗೆ

ಕರಗುವ ಮೇಣದಂತೆ
ಗಟ್ಟಿಚಿಪ್ಪಿನ ಸ್ವಾತಿಮುತ್ತಿನಂತೆ
ಹೊಂಗೆಯ ಮರದಂತೆ ತಂಪೆರೆದೆ
ನಮಗೆಲ್ಲ ಹೇಳದೆ ಕೇಳದೆ ಹೋದೆ

ಆಸರೆಯ ಜೀವ
ಉಸಿರು ನಿಲ್ಲೋವರೆಗೂ
ನೋವು ನುಂಗಿದ ಜೀವ
ಕೊನೆಗೂ ಕಣ್ಣು ತೆರೆಯದೇ ಹೋದೆ

ಕಂಬನಿ ಕೂಡ ಬತ್ತಿ ಹೋಯಿತು
ನಿನ್ನ ನೆನಪೊಂದೇ ಜೊತೆಯಾಯಿತು
*smk*