...

6 views

ಜಾತಿವಾಚಕಗಳ ಅಬ್ಬರ
ಜಾತಿವಾಚಕಗಳ ಅಬ್ಬರ ..
________

ನಾವೆಲ್ಲ ಶಾಲಾ ಬಾಲಕರಾಗಿದ್ದಾಗಿನಿಂದಲೇ ನಮ್ಮ ಮನೆಗಳಿಂದ ನಮ್ಮ ನಮ್ಮ ಜಾತಿ ಮತ ಧರ್ಮ ಲಿಂಗ ಸಂಬಂದಿ ಪೂರ್ವಾಗ್ರಹಗಳ ಜೊತೆಗೆ ತಗಲುಹಾಕಿಕೊಂಡುಬಿಟ್ಟಿರುತ್ತೇವೆ ...
ನಮಗೆ ನಮ್ಮ ಜಾತಿ ಯಾವುದೆಂದು ಗೊತ್ತಾಗಿರುತ್ತದೆ ..ನಮ್ಮ ದರ್ಮ ಯಾವುದೆಂದು ಗೊತ್ತಿರುತ್ತದೆ .ನಮ್ಮ ಜಾತಿ ದರ್ಮಗಳ ಸ್ಥಾನ‌ ಮಾನಗಳು ಏನೆಂದೂ ಗೊತ್ತಾಗಿರುತ್ತದೆ...ನಮಗಿಂತ ಕೀಳು ಯಾರು ? ಮೇಲಿನವರು ಯಾರು ಎನ್ನುವುದು ಮನೋಗತವಾಗಿರುತ್ತದೆ ..‌

ನಮ್ಮ ಹೆಸರುಗಳ ಜೊತೆಗೆ ನಮ್ಮ ನಮ್ಮ ಜಾತಿ ದರ್ಮಗಳ 'ಐಡಿ' ಗಳು ತಗಲುಬಿದ್ದಿರುತ್ತವೆ ನಮ್ಮ ವಿದ್ಯಾವಂತ ಪೋಷಕರುಗಳು ಸಹ ತಮ್ಮ ಮಕ್ಕಳ ಹೆಸರುಗಳ ಜೊತೆಗೆ ತಮ್ಮ ತಮ್ಮ ಜಾತಿಗಳ ದರುಮಗಳ ನಾಮಧೇಯಗಳನ್ನು ತಗಲು ಹಾಕಿ ಶಾಲೆ ಕಾಲೇಜುಗಳಿಗೆ ಸೇರಿಸಿಬಿಟ್ಟಿರುತ್ತಾರೆ ...

ಶಾಲಾ ಬಾಲಕರಾಗಿದ್ದಾಗಿನಿಂದಲೇ ಸ್ವಜಾತಿ ಯ ಸ್ವದರ್ಮದ ಗೆಲೆಯ ಗೆಳತಿಯರ ಹುಡುಕಾಟ ನಡೆಸುತ್ತಿರುತ್ತೇವೆ ...ಅನ್ಯರ ಜೊತೆ ಅಷ್ಟಕ್ಕಷ್ಟೇ ಎಂಬ ಧೋರಣೆಯೊಂದು ಆಗಲೇ ಬೆಳೆದು ಕೋಡುಗಟ್ಟುತ್ತಿರುತ್ತದೆ ....

ಈ ಅಸೂಕ್ಷ್ಮತೆ ಸಾಮಾಜಿಕ ಗುರುತುಗಳ ನಿರ್ಲಜ್ಜ ಪ್ರದರ್ಶನ ಭಾರತೀಯ ಸಂವಿದಾನದ ಜಾತ್ಯತೀತ ಆಶಯಗಳಿಗೆ ವಿರುದ್ಧವಾದದ್ದು ..ಜಾತಿಸೂಚಕ ಪದಗಳು ವಾಸ್ತವವಾಗಿ ಸಾಮಾಜಿಕ ಮೇಲು ಕೀಳಿನ ವಾಹಕಗಳಾಗಿದ್ದು ಎಲ್ಲ ಜಾತಿಯ ಮಕ್ಕಳೂ ಕಲಿಯುವ ಶಾಲಾ ಕಾಲೇಜುಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯದ ಸನ್ನಿವೇಶವನ್ನು ಸೃಷ್ಟಿಸುತ್ತವೆ ...

ಇವೆಲ್ಲದರಿಂದ ದೂರ ಉಳಿಯದೆ ಇದ್ರೆ ನಾವು ಒಂದು ಸಮಾಜವಾಗಿ ಪರಸ್ಪರ ಸಮೀಪಿಸುವುದು ಎಂದಿಗೂ ಸಾಧ್ಯವೇ ಆಗುವುದಿಲ್ಲ‌.. ರಾಷ್ಟ್ರದ ಜಾತ್ಯತೀತ ಏಕೀಕರಣಕ್ಕೆ ನಾವು ಒಂದು ಕಿಲುಬುಗಾಸಿನಷ್ಟೂ ಕೊಡುಗೆಯನ್ನು ಕೊಡಲು ಅಸಮರ್ಥರಾಗುತ್ತೇವೆ ....

ಅಚಾರ್ , ಆಚಾರ್ಯ , ಗೌಡ , ಆರಾದ್ಯ , ಐಯ್ಯಂಗಾರ್ , ಭಟ್ ಹೆಗ್ಡೆ , ನಾಯಕ್ , ಮಾದರ್ , ಹೊಲೆಯಾರ್ , ದ್ವಿವೇದಿ , ಚತುರ್ವೇದಿ , ತ್ರಿವೇದಿ , ನಾಯಕ್ , ಗಾಣಿಗ , ಉಪ್ಪಾರ್ ಶರ್ಮ , ಮಿಶ್ರ , ಭಾರದ್ವಾಜ್ , ಅಡಿಗ , ನಾಡಿಗ್ , ಜೋಷಿ ಕುಂಬಾರ್ , ಪಂಡಿತ್ , ರೆಡ್ಡಿ , ವಿಶ್ವಕರ್ಮ , ಪಾಂಚಾಲ್ ಕಂಬಾರ.....ಇತ್ಯಾದಿ ಹೆಸರುಗಳ ಜೊತೆಗೆ ನಮ್ಮ ಜಾತ್ಯಸ್ತ ದರ್ಮಸ್ತ ಮನೆ ಮನೆಗಳು ತಗಲುಹಾಕಿರುವ ಈ ಹಾಳು ಮೂಳನ್ನೆಲ್ಲ ಕಿತ್ತಾಕದೆ ಹೋದರೆ ನಾವು ಸ್ವಯಂ ಶಪಿತರು ಎನ್ನುವುದರಲ್ಲಿ ಸಂಶಯವೇ ಇಲ್ಲ..

ನಾವು ನಮ್ಮ ಶಾಲೆ ಕಾಲೇಜು ವಿಶ್ವ ವಿದ್ಯಾಲಯಗಳಲ್ಲಿ ಕಲಿತ ವಿದ್ಯೆ ಮೂರ್‌ ಕಾಸ್ಗೂ ಸಮನಿಲ್ಲ ದ ವಿದ್ಯೆಯಾಗುತ್ತದೆ ...

ಕೈಲಿ ಕಾಸಿಲ್ಲದೆ ಸಾಲ ಮಾಡಿದ ದುಡ್ಡಿನ ಮೇಲೆ ನಡೀತ ಇರೋ ನಮ್ಮ ದೇಶ ನಮ್ಮ ವಿದ್ಯಾ ಕಲಿಕೆಯ ಮೇಲೆ ಮಾಡಿದ ಹೂಡಿಕೆಯೆಲ್ಲ ವ್ಯರ್ಥವಾಗಿಹೋಗುತ್ತದೆ ..

ಎಲ್ಲಕ್ಕಿಂತ ಮುಖ್ಯವಾಗಿ‌ ಒಂದು ಜಾತ್ಯತೀತ ಏಕೀಕೃತ ಸಮುದಾಯವಾಗಿ ಎದ್ದುನಿಲ್ಲಲು ನಾವು ಸೋತು ರಾಷ್ಟ್ರವನ್ನು ಕರುಣಾಜಾನಕ ಸ್ಥಿತಿಯಲ್ಲಿ ನಿಲ್ಲಿಸಿಬಿಡುತ್ತೇವೆ ..

ಡಾ ಕೆ ಪಿ ನಟರಾಜ
7. 7. 2020
©pratimamoha
© prathima moha