...

14 views

ಒಲವಿನ ಗೆಳತಿ
ಹೇ! ಗೆಳತಿ ನೀ ಹೀಗೆ ಕಾಡದಿರು,
ನೀ ಮುಂಗುರುಳ ಸರಿಸಿ
ನನ್ನನ್ನು ಬಂಧಿಸಿಬಿಡು
ಆಗಲಾದರೂ ನಿನ್ನ ಮುಂಗುರುಳ
ಬಂಧನದಲ್ಲಿ ಬೆಚ್ಚಗಿರುವೆ.. !

ಹೇ! ಗೆಳತಿ ನೀ ಹೀಗೆ ಕಾಡದಿರು,
ನಿನ್ನ ಮೂಗಿನ ಮೂಗುತಿಯ
ಮೇಲೆಯೇ ನನಗೂ ಜಾಗ ಕೊಡು
ಸಂತಸದಿ ನಿನ್ನಂದವನ್ನೇ ಬಲು ಸೋಜಿಗವಾಗಿ
ಗಮನಿಸುತ ನಿನ್ನಂದವ ಕಾಯುವೆ... !

ಹೇ! ಗೆಳತಿ ನೀ ಹೀಗೆ ಕಾಡದಿರು,
ನಿನ್ನ ಕೆಂದುಟಿಗಳನ್ನು ಒಮ್ಮೆ ಅರಳಿಸಿ
ದಾಳಿಂಬೆಯ ಹಲ್ಲುಗಳ ತೋರಿಬಿಡು
ಸದಾ ನಿನ್ನ ನಲ್ಮೆಯ ಕಿರು ನಗೆಯನು
ನೋಡುತ್ತಲೆ ಇಡೀ ಜೀವನ ಸವೆಸಿಬಿಡುವೆ..!