...

13 views

ಬರೆ ಹಾಕಿ ಹೋದೆ ನೀನು
ಹಗುರಾಗಿಸು ಬಾರೆ
ನಗುವೇ ಕಾಣದ ಮಗುವಾಗಿರುವೆ ನಾ
ಆತಂಕವೋ ಅನುಕಂಪವೋ ಒಂದೂ ತಿಳಿಯದಾದೆ ನಾ
ಹಾಲು ಜೇನಿನಂತ ಬದುಕಿಗೆ ಕೋಲಾಹಲವೇಕೆ
ಕಾಲ ಕಳೆದಂತೆ ನೀ ಕಾಲ್ಕಿತ್ತೆಯೇತಕೆ..

ಕಲ್ಲಾಗಿರುವೆ ನೀ
ಒಕ್ಕಲೆಬ್ಬಿಸಿದ ಮೇಲೆ
ಎಲ್ಲೆ ಹುಡುಕಿದರೂ
ಕಾಣದೇ ನೆಲೆ ಇನ್ನೆಲ್ಲಿ ಮೆ
ನೆಲೆಯೂರಿದೆ ನೀ..

ಹದವಾಗಿದೆ ಹೃದಯ
ನಿತ್ಯ ಉದುರುವ ಕಂಬನಿಗಾಗಿ
ಬಿತ್ತಲು ಬಾರದ ಒಲವೊಂದು
ಕತ್ತಲೆಯಾಗಿ ನಿಂತಿದೆ..

ಮರಿಚಿಕೆಗೂ ನಾಚಿಕೆ ಏನೋ
ಮರೆಯದೆ ನೆನೆದವನ ಕಂಡು
ದಂಡೆತ್ತಿ ಬಂದಿವೆ ನಗು ಮೊಗದವಳ ನೆನಪಿನ ದಂಡು

ಆತುರವೇನು ನೀ ಸರಿಯಲು
ಉತ್ತರವೆಲ್ಲ ನಿರುತ್ತರವೇನು
ಕತ್ತರಿಯೊಳಗೆ ಸಿಕ್ಕಿಕೊಂಡೆ ನಾನು
ಎತ್ತ ಸರಿದು ಬರೆ ಹಾಕಿ ಹೋದೆ ನೀನು..