...

5 views

ಅವಿನಾ ಭಾವ
ಭಾವ ವರ್ಷ

ಬಿಂದು ೬

ಅವಿನಾ ಭಾವ

ನನಗಾಗಿ ನೀನಿದ್ದೇ ಇರುವೆ
ಆಹಾ! ಎಂಥ ಆಪ್ಯಾಯ ಭಾವ
ನಿನ್ನ ತೋಳಲ್ಲಿ ನಾನಿರುವೆ
ಖುಷಿಗೆ ಹೋಗಿಬಿಡಲೀ ಜೀವ

ಮನಗಳೆಂದೋ ಪರಸ್ಪರ ಲೀನ
ಹೃದಯಗಳು ಏಕ ತಲ್ಲೀನ
ನಿನ್ನ ಅಪ್ಪುಗೆಯಲಿದೆ ಸಾರ್ಥಕತೆ
ಅವಿನಾ ಭಾವನೆಯ ತಾದ್ಯಾತ್ಮತೆ

ನಮ್ಮನ್ನಗಲಿಸುವ ಶಕ್ತಿ
ಈ ಲೋಕಕ್ಕಿನ್ನಿಲ್ಲವೇ ಇಲ್ಲ
ತಾಯಿ ಮಡಿಲು ಸೇರಿದ ಹಾಗೆ
ಭಯಕಿನ್ನೆಡೆಯೇ ಇಲ್ಲ

ನೀನು ನಾನಾದ ತನನಾ
ನಾನೇ ನೀನಾದ ಮನನ
ಇನ್ನೂ ಸುಂದರವೀ ಜೀವನ
ಸಿಕ್ಕಿತೆನ್ನಾತ್ಮದ ಸಂಜೀವನ

ಸುಜಾತಾ ರವೀಶ್
ಮೈಸೂರು
೧೬.೧೧.೨೦೨೨