ಕನ್ನಡ..
ಅಮ್ಮ ಕಲಿಸಿದ ಮೊದಲ ಅಕ್ಷರ ಕನ್ನಡ ನುಡಿ
ನನ್ನ ತೊದಲ ಮಾತು ಸೇರಿದ್ದು ತಾಯಿ ಉಡಿ
ಪ್ರತಿಕ್ಷಣ ಕನ್ನಡ ಸ್ವರಕೆ ಸಾಕ್ಷಿ ಹೃದಯದ ಗುಡಿ
ಮಿಡಿತದಿ ಮಿಂದು ಮೇಳೈಸಿದೆ ಪ್ರತಿ ನಾನ್ನುಡಿ..
ನಾಡ ನುಡಿಯ ಐಸಿರಿ ಕನ್ನಡವೇ ಮೇರುಗಿರಿ
ಗಡಿ ಗುಡಿಯಲೂ ಬಡಿತ ಹೆಚ್ಚಿಸುವ ವೈಖರಿ
ಮಂದಾರ ಕಂಪು ಚೆಲ್ಲುವ ಸಂಪನ್ನ ಸಂಚಾರಿ
ಮುದದಿ ಮನವರಳಿಸಿ ನಗುವ ಭುವನೇಶ್ವರಿ..
ಕಣಕಣದಿ ಬೆರೆತ ಕನ್ನಡವೆಂದರೆ ಬಲು ಪ್ರೀತಿ
ನಾಡಿಗೆ ಕನ್ನಡ ಸಾಹಿತ್ಯದಿಂದ ದಕ್ಕಿದೆ ಕೀರುತಿ
ರಸ ಋಷಿಗಳ ನಾಡಲಿ ಕನ್ನಡಕೆ ಭಯಭಕುತಿ
ನಿತ್ಯ ಮನೆ ಮನದಿ ಬೆಳಗಲಿ ಕನ್ನಡ ಜ್ಯೋತಿ..
ಕಳೆದರೂ ಸಂತತಿ ನಶಿಸದಿರಲಿ ಕನ್ನಡ ಭಾಷೆ
ಬಳಸಿ ಬೆಳೆಸೋಣ ಭಾಷೆಯ ಬಾಳಿನ ಉಷೆ
ನಮಗೇಕೆ ಬೇಕು ಅನ್ಯಭಾಷೆ ಎನ್ನಡ, ಎಕ್ಕಡ
ನಮ್ಮೆಲ್ಲರ ಹೃದಯದ ಮಿಡಿತವಾಗಲಿ ಕನ್ನಡ..
#Kannada #Kannadaquote #vijaykumarvm #ವಿಬೆಣ್ಣೆ
© ವಿಜು ✍ 💞
ನನ್ನ ತೊದಲ ಮಾತು ಸೇರಿದ್ದು ತಾಯಿ ಉಡಿ
ಪ್ರತಿಕ್ಷಣ ಕನ್ನಡ ಸ್ವರಕೆ ಸಾಕ್ಷಿ ಹೃದಯದ ಗುಡಿ
ಮಿಡಿತದಿ ಮಿಂದು ಮೇಳೈಸಿದೆ ಪ್ರತಿ ನಾನ್ನುಡಿ..
ನಾಡ ನುಡಿಯ ಐಸಿರಿ ಕನ್ನಡವೇ ಮೇರುಗಿರಿ
ಗಡಿ ಗುಡಿಯಲೂ ಬಡಿತ ಹೆಚ್ಚಿಸುವ ವೈಖರಿ
ಮಂದಾರ ಕಂಪು ಚೆಲ್ಲುವ ಸಂಪನ್ನ ಸಂಚಾರಿ
ಮುದದಿ ಮನವರಳಿಸಿ ನಗುವ ಭುವನೇಶ್ವರಿ..
ಕಣಕಣದಿ ಬೆರೆತ ಕನ್ನಡವೆಂದರೆ ಬಲು ಪ್ರೀತಿ
ನಾಡಿಗೆ ಕನ್ನಡ ಸಾಹಿತ್ಯದಿಂದ ದಕ್ಕಿದೆ ಕೀರುತಿ
ರಸ ಋಷಿಗಳ ನಾಡಲಿ ಕನ್ನಡಕೆ ಭಯಭಕುತಿ
ನಿತ್ಯ ಮನೆ ಮನದಿ ಬೆಳಗಲಿ ಕನ್ನಡ ಜ್ಯೋತಿ..
ಕಳೆದರೂ ಸಂತತಿ ನಶಿಸದಿರಲಿ ಕನ್ನಡ ಭಾಷೆ
ಬಳಸಿ ಬೆಳೆಸೋಣ ಭಾಷೆಯ ಬಾಳಿನ ಉಷೆ
ನಮಗೇಕೆ ಬೇಕು ಅನ್ಯಭಾಷೆ ಎನ್ನಡ, ಎಕ್ಕಡ
ನಮ್ಮೆಲ್ಲರ ಹೃದಯದ ಮಿಡಿತವಾಗಲಿ ಕನ್ನಡ..
#Kannada #Kannadaquote #vijaykumarvm #ವಿಬೆಣ್ಣೆ
© ವಿಜು ✍ 💞