...

9 views

ಸ್ನೇಹ
ಬದುಕಿನ ಪುಟಗಳಲಿ
ಹಲವು ಮಜಲುಗಳು,
ನೊಂದ ಮನಕೆ ತಂಪು ನೀಡಲು
ಎಷ್ಟೋ ಸ್ನೇಹಿತರು;
ಆಳಕ್ಕೆ ಮುಳುಗ ಹೊರಟ
ಮನವ ಸಂತೈಸಿ,
ಒಲವಿನ ಕೈ ಹಿಡಿದು
ತಬ್ಬಿದ ಋಣ
ಏನೆಂದು ಬರೆಯಲಿ ಕವನ...!

ಮಾತು ಮಾತಿಗೂ
ನಗುವ ಚೆಲ್ಲುತಾ,
ಎದೆಯ ತುಂಬಾ
ಪ್ರೀತಿ ಹೊಳೆ ಹರಿಸುತ;
ಧೈರ್ಯ ತುಂಬಿದ
ನಿನ್ನ ಸಿಹಿ ಮಾತು,
ಕೇಳಕೇಳುತಾ ಎಲ್ಲಾ
ನೋವ ಮರೆತೆ
ನನ್ನ ಅಂತರಂಗದಿ ಬರೆದೆ ಕವಿತೆ...

ಬಳಿ ಇರದಿರಲೇನು
ಜೊತೆಯಾಗಿ ನಾವಿಬ್ಬರೂ,
ಗೆಳೆತನಕ್ಕೆ ಬಾರದು
ಎಂದೂ ಆಪತ್ತು,
ಕಣ್ಣು ಒರೆಸಲು
ಸಿಹಿ ನುಡಿ ಸಾಕು;
ಮಾತಲ್ಲಿ ಹೇಳಲಾಗದ
ಸಿಹಿ ಸವಿಯಾದ ಮುತ್ತು
ಯಾವಾಗಲೂ ಈ
ಮುತ್ತು ಇರಲಿ ನನ್ನ ಸ್ವತ್ತು ...!

ಸ್ನೇಹಿತರ ದಿನದ ಶುಭಾಶಯಗಳು...
Wish you happy friendship day

...✍️Shamna.


© ಹೃದಯ ಸ್ಪರ್ಶಿ