ನಗುವ ನೀರಾಜನ
ನಿನ್ನ ನಯನದಲಿ ನೋವೇಕೆ ನಲ್ಲೆ?
ನನ್ನ ನಗುವೇ ನಗಬಾರದೇ?
ನನ್ನ ನಗುವಲಿ ನಿನ್ನ ನಗುವು,
ನಂಬಿಕೆಯಿಟ್ಟು ನಕ್ಕು ನಗಲಿ,
ನಂಜು ನಶಿಸಿ, ನೋವನಳಿಸಿ,
ನಸುನಗಲಿ ನಗುವಿನ ನಸುಕಿಗೆ!
ನಿನ್ನ ನಗುವಿನ ನಗವ ನೀಡು,
ನನ್ನ ನಗುವಿನ ನತ್ತ...
ನನ್ನ ನಗುವೇ ನಗಬಾರದೇ?
ನನ್ನ ನಗುವಲಿ ನಿನ್ನ ನಗುವು,
ನಂಬಿಕೆಯಿಟ್ಟು ನಕ್ಕು ನಗಲಿ,
ನಂಜು ನಶಿಸಿ, ನೋವನಳಿಸಿ,
ನಸುನಗಲಿ ನಗುವಿನ ನಸುಕಿಗೆ!
ನಿನ್ನ ನಗುವಿನ ನಗವ ನೀಡು,
ನನ್ನ ನಗುವಿನ ನತ್ತ...