...

15 views

ಪ್ರೀತಿಯ ನೆನಪು

ದಿನದ ಆರಂಭವೂ ನೀನೇ
ದಿನದ ಅಂತ್ಯವೂ ನೀನೇ
ನೀನಿರದ ಈ ಜೀವ ಶೂನ್ಯ
ಅರಿವಾಗದೇ ನಿನಗೇನು

ನಟಿಸುತ್ತಿರುವೆಯ ಪೆದ್ದನಂತೆ
ಈ ಸಖಿಯ ಅಳು ಕೆಳುತ್ತಿಲ್ಲವೆ
ನೀನೇ ನನ್ನ ಕನಸು ತಿಳಿಯುತ್ತಿಲ್ಲವೆ
ಕಣ್ಣ ಸನ್ನೆಯು ನೀನೇ ಅಲ್ಲವೇ

ನಿನಗಾಗಿ ಕಾಯುತಿರುವೆ
ಜಾತಿ ಧರ್ಮ ಯಾವುದಾದರೇನು
ನಿಜ ಪ್ರೀತಿ ನನದು ಸಖ
ಒಂದು ಬಾರಿ ಹೇಳಿ ಬಿಡು

ಈ ಕಣ್ಣುಗಳು ಇಣುಕಿ ನೋಡುತಿವೆ
ನಿನ್ನ ಬರುವಿಕೆಯ ಕಾಯುತ್ತಿವೆ
ನಿನ್ನ ದಾರಿಯ ನೋಡುತ ನಾಚುತಿವೆ
ಬಂದು ಬಿಡು ಈ ಸಖಿಯಲ್ಲಿ

ರಾಧ ಹಾಸನ
© All Rights Reserved