...

21 views

ಬಣ್ಣದ ಕನಸು
ಕನಸೇ ಕನಸೇ ಓ ಕನಸೇ
ರಂಗು ರಂಗಿನ ಓ ಕನಸೇ
ನೀನೇಕೆ ಎನ್ನ ಕಾಡಿಸುವೆ
ನಿದ್ದೆಯಿಂದ ರಾತ್ರಿ ಎಬ್ಬಿಸುವೆ

ಸುಮ್ಮನೇ ಬಿದ್ದು ಬಿಡು ಕನಸೇ
ನನಸಾಗಿ ಆನಂದಿಸುವ ಹಾಗೇ
ಕರೆದೊಯ್ಯು ಕನಸಿನ ಲೋಕಕೆ
ಪಿಸುನುಡಿಯೆ ಬಂದು ಕರ್ಣಕೆ

ಕನಸಾಗಿ ಬಂದು ಮನಸ ಕೆಡಿಸದಿರು
ನಿರಾಸೆಯಾಗಿ ಕಂಬನಿ ತರಿಸದಿರು
ನನಸಾಗದಿದ್ದರೂ ನೋಯಿಸದಿರು
ಚಿಂತೆಗೆ ನನ್ನ ದಿನದಲಿ ದೂಡದಿರು

ಕೊನೆಯಿಲ್ಲ ಕನಸು ಕಾಣುವ ಕಣ್ಣಿಗೆ
ಮಿತಿಯಿಲ್ಲ ಬಯಸುವ ಸವಿಗನಸಿಗೆ
ಕನಸೇ ಕನಸೇ ಓ ಕನಸೇ
ರಂಗು ರಂಗಿನ ಓ ಕನಸೇ.
_✍️ಶೃತಿ ಶೈವ

#WritcoQuote#writcoapp#Writer#Writco#shruthishaiva#Writcopoem#ಕನಸು#ಬಣ್ಣ