...

11 views

ಕರೆದಾಗ....!!!!
ಸಾಕೆಂದು ಬೇಜಾರಗೋ ಮೊದಲೇ
ಓಡಿ ಹೋಗೋ ಮನಕೆ ಮುದವೆಲ್ಲಿ
ಸಿಗುವುದು ....?

ನೋವ ನೂಕುತಾ ಬದುಕುವೆವೆಂಬ ಜಂಬದ ಬಿಂಬಕ್ಕೆ ಹಿಡಿವರು ಬರಲಿಲ್ಲ ತೋರವಂತೆ ......ಕನ್ನಡಿಯ....!!

ತೀರುವುದೆಲ್ಲಿ ಬಯಕೆ ನೀಡೋರ ನಾಡಿ
ಮಿಡಿಯದಿರಲು......!!

ನಿತ್ಯ ಮಾನಕೆ ಸತ್ಯ ಲೋಕಕೆ .. ಎಂಬಂತೆ
ಒಂದು ಇನ್ನೊಂದಕೆ ಎಂದು ಬಂದಾನಕೆ .. ?


ಯಾರಿಗೋ..?.. ಏನೋ ಮಾಡುವ ಲೋಕದಲ್ಲಿ ಎಲ್ಲರಿಗೂ ಅವಸರ ... !!!

..
ನಂಬಿಕೆಗೆ ಚ್ಯುತಿ ಬಂದಾಗ ಕೈ ತಪ್ಪಿದ ಬಂಧಗಳ
ಬಂಧುಗಳ ಬಳಿ ಹೇಳಿಕೊಳ್ವರು
ಬರುತ್ತಿಲ್ಲ ಮರಳಿ... ನಿತ್ಯ ಕರೆದಾಗ..???

ಸಿಂಗಾರದ ಬದುಕಿದು ಬಂಗಾರಕ್ಕೆ ಬೆಲೆ
ತುಸು ಜಾರಿದರೆ ದೂರುವುದು ನಿಮ್ಮ ನೆಲೆ
ಕೇಳೋದಿಲ್ಲ ಯಾರೂ ನಿಮ್ಮಬಂದು ಮನವು ಕರೆದಾಗ.....???

ಎಲ್ಲಾ ರೀತಿ ಪಾತ್ರ ಮಾಡಿ ಮುನ್ನುಡಿಯ ನುಡಿಯಲ್ಲಿ ಪ್ರಮಾಣ ಮಾಡಿ ನಿಮ್ಮಿಂದ ನಿಲ್ವರು ದೂರ ಬಾರದೆ ಕರೆದಾಗ ....??

ಖಾಲಿಯೆಂಬ ಪುಸ್ತಕ ಓದಿ ಮುಗಿಸದೆ
ನಿತ್ಯ ಪುಟ ತಿರುವಿ ನೆನೆಯುವ ಆ ಮುನ್ನುಡಿಯ ನುಡಿಯಲ್ಲಿ ನ ಆಣೆ ಮಾತುಗಳಿಗೆ ಕಟ್ಟು ಬಿದ್ದಾದರು ಬರಲೇ ಇಲ್ಲ ಮತ್ತೊಮ್ಮೆ ಕರೆದಾಗ.........?

ಒಳಗೊಳಗೇ ಏನೋ ಮುಜುಗರ ಇದೆಯೋ ಇಲ್ಲವೋ ಅದು ಯಾವ ಭಾವವೋ...
ಇನ್ನೊಮ್ಮೆ ಬಾರದವರ ತಿರುಗಿ ಕರೆದಾಗ...?

ಕೊನೆಯ ಬಾರಿ ನೆನೆದು ಹೋಗುವ ಎಂದು ಮುಂದೆ .... ಸೋತು ಕರೆದರು ಬರುವುದಿಲ್ಲ ಬಾರದವರು ಮತ್ತೆ ಕರೆದಾಗ......!!!!!!!!


© deva domaiah