...

8 views

ಜೀವದ ಗೆಳತಿ
🌹 *:ಜೀವದ ಗೆಳತಿ:* 🌹

*ಎಷ್ಟು ಚೆಂದದ ಈ ಸುಂದರ ಗೆಳತಿ,
*ಎಂದಿಗೂ ಬಳಿ ಇರೋ ಪ್ರಾಣದ ಒಡತಿ,

*ಮಾತುಗಳಲ್ಲಿ ಮಾತುನು ಪೋಣಿಸಿ,
*ಪ್ರೀತಿಯ ನುಡಿಯಲಿ ಪ್ರೀತಿಯ ಬೆರೆಸಿ,

*ಭರವಸೆಯೊಂದಿಗೆ ನಡೆಯುತ ಸಾಗಿ,
*ಕಷ್ಟ, ಸುಖದಲಿ ಜೊತೆ ಭಾಗಿಯಾಗಿ,

*ಸಂತಸ ಮೂಡಿಸಿ, ಸಂಭ್ರಮ ಚೆಲ್ಲುತ,
*ಪ್ರತಿಕ್ಷಣಗಳನೂ ಆನಂದದಲ್ಲಿರಿಸುತ,

*ಕುಟುಂಬ ಮರೆಸುವ ಶಕ್ತಿಯ ಹೊಂದಿಹ,
*ಸ್ನೇಹದ ಭಾವದಿ ಮನದಲಿ ನಿಂತಿಹ,

*ಸುಖ ಜೀವನವನೇ ಶಾಶ್ವತ ಹರಸಿ,
*ನೆಮ್ಮದಿ ಬದುಕದು ಇರಲೆಂದು ಬಯಸಿ,

*ಮನದೊಳ ಆಸೆಯ ಕ್ಷಣದಲೇ ಅರಿತು,
ಹೃದಯ ಭಾಷೆಯ ಖುಷಿಯಲಿ ಕಲಿತು,

ಒಟ್ಟಿಗೆ ಹೀಗೆಯೇ ಇರುವ ಆಸೆಯು,
ಜೀವ ಗೆಳತಿಯ ಬಿಟ್ಟಿರದ ಬಯಕೆಯು..

✍️...
© ಯಾರನ್ನು ಮೆಚ್ಚಿಸಲು ನಾನು ಬರೆಯುತ್ತಿಲ್ಲ ನನ್ನ ಸಂತೋಷಕ್ಕಾಗಿ ಈ ನನ್ನ ಬರಹ