...

4 views

"ಹೃದಯದ ಬಡಿತ....
"ಹತ್ತಿರವಿದ್ದು ದೂರಾದೆ ಏಕೆ
ಮನದಿ ನೂರಾರು ಬಯಕೆ

ಹೇಳದೇ ದೂರಾದೆ
ತಪ್ಪಾದರೂ ಏನಿದೆ

ಏತಕೋ ಮನದಿ ನೋವು
ತಿಳಿಯದು ಮನವು

ನಂಬಿದ್ದ ಮನಕೆ
ಧ್ರೋಹವು ಏತಕೆ

ಬಾ ನಲ್ಲ ಕಾದಿಹೆ ನಾನು
ಬರುವೆಯಾ ಮತ್ತೊಮ್ಮೆ ನೀನು

ಭಯವು ಆವರಿಸಿದೆ ನನ್ನಲಿ
ತುಂಬಿಹೆ ನೀ ಕಣಕಣದಲಿ

ಜೊತೆಯಲಿ ಬಾರದೇ
ಹೃದಯವು ಸೊರಗಿದೆ

ಮನವು ಸೋತಿದೆ
ಬಯಕೆಯು ನಿನ್ನದೇ

ಅರಿಯದಾದೆಯ ನನ್ನೀ
ತೊಳಲಾಟ

ಮರೆತೆಯಾ ಇಬ್ಬರ
ಒಡನಾಟ

ತಬ್ಬಲಿಯ ನಾನಿಂದು
ನೀ ಸೇರು ಬಂದು

ಕಾದಿಹೆನೋ ಕೊನೆಯವರೆಗೂ
ಸಾವಿನ ತುದಿಯವರೆಗೂ

ಅಪ್ಪಣೆಯೇ ನಿನಗೆ
ಒಪ್ಪಿಗೆಯು ಬೇಕೆನಗೆ

ಬಾರೆಯಾ ಜೊತೆಗೆ
ಸಾಗುವ ಕೈ ಹಿಡಿದು ಹೀಗೇ..,✍
💖shobha 🕊🕊