...

10 views

ನೀನಿದ್ದರೆ ಜೊತೆಯಲಿ...
ನೀನಿದ್ದರೆ ಜೊತೆಯಲಿ
ವೇಳೆಯ ವೇಗವೂ ಚೂರು ಹೆಚ್ಚೇ

ಹುಚ್ಚು ಕುದುರೆ
ಓಡಿದಂತೆ ನಿನ್ನ ನಗುವ ಕಂಡ

ಮನವು ಹೆಚ್ಚೆಚ್ಚು
ನಿನ್ನೆಡೆಗೆ ಓಡೋಡಿ ಬರುವುದು

ಅದ ಹಿಡಿಯುವ ಪ್ರಯತ್ನ
ಚೂರಾದರೂ ನೀ ಮಾಡಿದರೆ

ನನ್ನೀ ಪ್ರೇಮದ ಫಲಕಕ್ಕೆ
ನಿನ್ನದೇ ಹೆಸರು ಅಚ್ಚಾಕಿಸಿ
ನಿನ್ನ ಹೆಸರಲ್ಲೇ ಉಸಿರಾಡುವೆ...

~ ನಾನ್ಯಾರು ✍️