ಅವನು
ಅಂದು ಕಾರಣವಿಲ್ಲದೆ ನೀ ಬಂದೆ
ಸುಮ್ಮನಾದೆ ಅದ ಕೇಳದೆ ನಾ
ಹೆಮ್ಮರದಷ್ಟು ಪ್ರೀತಿ ಪ್ರೇಮವ ತಂದೆ
ಅರಿವಿಲ್ಲದೆಯೇ ನಿನ್ನ ಒಪ್ಪಿದೆ ನಾ
ಎಂದೆಂದೂ ನಿನ್ನೊಡನೆ ನಾನು ಇರಲು
ಎಣ್ಣೆ-ದಾರದಂತೆ ಬೆಳಗಬೇಕು ಇಬ್ಬರು
ಆಸೆ ಇದೆ ನವಿಲಂತೆ ಗರಿ ಬಿಚ್ಚಿ ಕುಣಿಯಲು
ಕಾರ್ಮೋಡ ಮಳೆ ಕರೆದಾಗ ನಾವಿಬ್ಬರು
ಮುದ್ದು ಪೆದ್ದು ಕೋಪ ತಾಪವು ಇಷ್ಟ
ಇದೇ ನನ್ನ ಸ್ವರ್ಗ, ಇದೇ ನನ್ನ ಪ್ರೀತಿ
ನೀ ನನಗೆ ಸಿಕ್ಕಿರುವುದೆ ನನ್ನ ಅದೃಷ್ಟ
ಆದರೆ ಅರಿವಿಲ್ಲ ಮುಂದೆ ಇರುವ ರೀತಿ
ನಮ್ಮ ಈ ಚಿಕ್ಕ ಪುಟ್ಟ ತುಂಟ ಮುನಿಸು
ಹಿಮದಂತೆ ಕರಗುವುದು ಮರು ಕ್ಷಣ
ನಮ್ಮ ಭವಿಷ್ಯದ ಬಗ್ಗೆ ಕಂಡಿರುವೆ ಕನಸು
ನನಸಾಗಲೆಂದು ಕಾದಿರುವೆ ಪ್ರತಿ ಕ್ಷಣ
ಚಾತಕ ಪಕ್ಷಿಯಂತೆ ಕಾದಿರುವೆ
ನಿನ್ನ ಒಂದು ಸಂದೇಶಕ್ಕಾಗಿ ನಾನು
ಜೀವನವಿಡೀ ನಾ ಬದುಕಿರುವೆ
ಇಷ್ಟು ದಿನದ ಕೋಟಿ ನೆನಪಲಿ ನಾನು
© hiddenwords_of_heart
ಸುಮ್ಮನಾದೆ ಅದ ಕೇಳದೆ ನಾ
ಹೆಮ್ಮರದಷ್ಟು ಪ್ರೀತಿ ಪ್ರೇಮವ ತಂದೆ
ಅರಿವಿಲ್ಲದೆಯೇ ನಿನ್ನ ಒಪ್ಪಿದೆ ನಾ
ಎಂದೆಂದೂ ನಿನ್ನೊಡನೆ ನಾನು ಇರಲು
ಎಣ್ಣೆ-ದಾರದಂತೆ ಬೆಳಗಬೇಕು ಇಬ್ಬರು
ಆಸೆ ಇದೆ ನವಿಲಂತೆ ಗರಿ ಬಿಚ್ಚಿ ಕುಣಿಯಲು
ಕಾರ್ಮೋಡ ಮಳೆ ಕರೆದಾಗ ನಾವಿಬ್ಬರು
ಮುದ್ದು ಪೆದ್ದು ಕೋಪ ತಾಪವು ಇಷ್ಟ
ಇದೇ ನನ್ನ ಸ್ವರ್ಗ, ಇದೇ ನನ್ನ ಪ್ರೀತಿ
ನೀ ನನಗೆ ಸಿಕ್ಕಿರುವುದೆ ನನ್ನ ಅದೃಷ್ಟ
ಆದರೆ ಅರಿವಿಲ್ಲ ಮುಂದೆ ಇರುವ ರೀತಿ
ನಮ್ಮ ಈ ಚಿಕ್ಕ ಪುಟ್ಟ ತುಂಟ ಮುನಿಸು
ಹಿಮದಂತೆ ಕರಗುವುದು ಮರು ಕ್ಷಣ
ನಮ್ಮ ಭವಿಷ್ಯದ ಬಗ್ಗೆ ಕಂಡಿರುವೆ ಕನಸು
ನನಸಾಗಲೆಂದು ಕಾದಿರುವೆ ಪ್ರತಿ ಕ್ಷಣ
ಚಾತಕ ಪಕ್ಷಿಯಂತೆ ಕಾದಿರುವೆ
ನಿನ್ನ ಒಂದು ಸಂದೇಶಕ್ಕಾಗಿ ನಾನು
ಜೀವನವಿಡೀ ನಾ ಬದುಕಿರುವೆ
ಇಷ್ಟು ದಿನದ ಕೋಟಿ ನೆನಪಲಿ ನಾನು
© hiddenwords_of_heart