ಮತ್ತೊಂದು ಹೊಸ ಪರ್ವ
ಬದುಕು ಮತ್ತೊಮ್ಮೆ ಮಗ್ಗುಲು ಬದಲಿಸಿತು...!!!
ರೆಕ್ಕೆ ಬಿಚ್ಚಿ ಹಾರಿದ ಕನಸುಗಳ ಮನನ,ಉಳಿದ ಕನಸುಗಳಿಗೆಲ್ಲಾ ಮತ್ತೊಮ್ಮೆ ಹೊಸ ಬಣ್ಣದ ಲೇಪನ
ಒಡೆದ ನಂಬಿಕೆಯ ತಳಹದಿಯ ಮೇಲೆ ಮಗದೊಂದು ಹೊಸತನದ ಪರ್ವ,ಒಂದಿಷ್ಟು ನಿರೀಕ್ಷೆ,ಮತ್ತೊಂದಿಷ್ಟು ಏನೋ ಭರವಸೆ..,ಮತ್ತೊಂದು ಕ್ಯಾಲೆಂಡರ್ ವರುಷದ ನಾಂದಿಯಿವು.
ಸುಧೀರ್ಘ ಒಂದು ವರುಷ ನೆನಪುಗಳಾಗಿ ಅಡಿಗಾಯಿತು ಮತ್ತೆ ಮತ್ತೆ ಹೆಕ್ಕಿ ಮೆಲುಕು ಹಾಕಲು
ಕಳೆದದ್ದು ಪಡೆದಿದ್ದು ಏನಿಲ್ಲಾ ಬದಲಾಗಿ ಎಲ್ಲರಿಂದಲೂ ಎಲ್ಲದರಿಂದಲೂ ಕಲಿತದಷ್ಟೇ..,
ವರುಷ ಕಳೆದಂತೆ ನೇಪಥ್ಯಕ್ಕೆ ಸರಿದು ಹೋಗುವ ಸ್ನೇಹ ಬಂಧಗಳ ನಕ್ಕು ಬೀಳ್ಕೊಟಾಯ್ತು ,ಉಳಿದ ಬಂಧಗಳ ಮತ್ತೆ ಎದೆಗವಚಿ ನಡೆದಾಯ್ತು ,ಹಾ..!!ಭಾವುಕತೆಯ ಪರಿಧಿ ದಾಟಿ ಎಂದೋ ನಡೆದಾಗಿದೆ ,ಬಂದವರೆಷ್ಟೋ ಹೋದವರೆಷ್ಟೋ ಉಳಿದವರೆಷ್ಟೋ ಲೆಕ್ಕವಿಲ್ಲ ಜೊತೆ ನಡೆವವರಷ್ಟೇ ಈ ಕ್ಷಣಕ್ಕೆ ನಮ್ಮವರು.
ವರುಷಗಳು ಕಳೆದಷ್ಟು ನಮ್ಮನ್ನು ಮಾಗಿಸುತ್ತದೆ ಪಕ್ವಗೊಳಿಸುತ್ತದೆ,ಪ್ರಬುದ್ದರಾದಷ್ಟು ಅತಿ ಭಾವುಕತೆಯ ಮನಸ್ಸು ಮತ್ತಷ್ಟು ನಿರ್ಲಿಪ್ತವಾಗುತ್ತದೆ. ಅನುಭಗಳ ಮಳಿಗೆಯದು ಬಹುದೊಡ್ಡದು ಬದುಕಿಗೆ.,ಏನೇ ಬಂದರು ಏನೇ ಆದರು ಕಾಲ ಕಲಿಸುವ ಪಾಠಗಳೊಂದಿಗೆ ಮತ್ತಷ್ಟು ಹೊಸತು ಕಲಿಯುತ್ತಾ ಜೊತೆ ಇರುವವರೊಂದಿಗೆ ಮುಂದೆ ಅನಿರೀಕ್ಷಿತ ಸ್ನೇಹ ಬಂಧಗಳಲ್ಲಿ ಜೊತೆಯಾಗುವವರೊಡನೆ ಇನ್ನೊಂದು ಕ್ಯಾಲೆಂಡರ್ ವರುಷಕ್ಕೆ ಬದುಕ ಪುಟವ ನಗುತ್ತಾ ತೆರೆಯುವ...!!!
-ಮೌನ ಹೃದಯ