...

6 views

ತಲೆಯೊಳಗಿನ ಹುಳ
ಮದ್ದಿಲ್ಲದ ನೋವಿನೊಳಗೆ ಒದ್ದಾಡುತಿರುವರು
ಅವರನ್ನಿವರು,ಇವರನ್ನವರು ಮೆಚ್ಚಿಸುತ
ಹೀಗೆ ಸಾಗಿತು ಇವರ ಪಯಣ
ಕಿಂಚಿತ್ತೂ ಆಲಿಸದ ದಂಡಿನದು ಬರೀ ಚೂ ಬಾಣ..

ತಲೆಯೊಳಗಿನ ಹುಳಕ್ಕೆ
ಕಲೆಯು ಬಣಗುಡುತ್ತಿತ್ತು
ಒಲ್ಲೆ ನಾನೊಲ್ಲೆ ಎನ್ನುತ್ತ ಸರಿದರು ಹಿಂದಕ್ಕೆ
ಬಲ್ಲವನೆಂದು ಕರೆದರೆ ಬೆಲೆ ಎಲ್ಲಿದೆ ಇವಕ್ಕೆ.

ವಿರೋಧವೇಕೆ ಹೇಳಿರಿ ಒಬ್ಬೊಬ್ಬರೆಂದಾಗ
ಸೇರಿ ಸುರಿದರು ಪಿಳ್ಳೆ ನೆಪಗಳನ್ನು
ತಲೆಯೊಳಗೆ ಹುದುಗಿದ್ದ ಹದ್ದು ಮೀರಿದ ಅಭಿಪ್ರಾಯಗಳನ್ನ
ಸಾವಿರ ಕಾಲಕೂ ಸುಧಾರಿಸಲಾಯಿತೆ.?ಇವರನ್ನ..

ಇವರಿಗೆ ಯಾವುದಿಷ್ಟ ಹೇಳಿ
ವೀರೋದಕ್ಕಾಗಿ ವೀರೋದವೊಂದನ್ನ ಬಿಟ್ಟು
ಅತ್ತಿತ್ತ ಸೇರಿದರು,ಊರೆಲ್ಲ ಅರಚಿದರು
ಸಣ್ಣತನದ ತೇರಿಗೆ ಬಣ್ಣ ಬಣ್ಣದ ತಳಿರು ಕಟ್ಟಿದರು...


*ರಮೇಶ್ ಹಡಪದ*