...

10 views

ಮಳೆ ಹನಿಯ ಸಂಗೀತ ನಾದ
ಸೂರ್ಯನ ಹೊಂಗಿರಣದಿ ಮೋಡದ ಮುಸುಕು ಕವಿದಿದೆ.
ಮಳೆರಾಯನ ಸ್ವಾಗತಕೆ ಅಲಂಕೃತ ಹೂಗಳ ಪಸರಿಸಿದೆ.

ನಾಚಿಕೆಯಿಂದ ಮರೆಯಾಗುವ ನವಿಲಿಗೆ
ಕುಣಿಯುವ ಹಂಬಲ.
ಸೂರ್ಯೋದಯದ ವೇಳೆ ಕೂಗೋ ಕೋಗಿಲೆಗೆ ಹಾಡುವ ಹಂಬಲ.
ಹೂಗಳ ಅರಳಿಕೆಗೆ ತಂಪ ನೆರೆಯುವ ಹಂಬಲ.
ಏನಿದೋ ಮಳೆರಾಯನ ಬರುವಿಕೆಯ ಅಬ್ಬರ.
ಬೃಂದಾವನವು ಕಾಯುತಿದೆ ತಂಪಿನ ಸ್ಪರ್ಶದ ಮಿಡಿವ ಕಾತುರ.

ತಟತಟನೆ ಬಿತ್ತೊಂದು ಮಳೆಹನಿಯು ಎಲೆಮರೆಯಿಂದ.
ಓಲಾಡುತಿದೆ ಎಲೆಯು ಹನಿಯ ನಾದದಿಂದ.
ಶುರುವಾಯಿತು ಸಂಗೀತನಾದವು ಜಿಗಿವ ಮಳೆಹನಿಗಳ ಸಂಭ್ರಮದಿಂದ.








© Altaf mulla