...

5 views

ಕಲ್ಪನೆಯಾಚೆ
ಕಲ್ಪನೆಯೆಂಬ ಕುಸ್ತಿ ಬಿಟ್ಟು
ವಾಸ್ತವದ ಆಳಕ್ಕಿಳಿಯಬೇಕು.
ಇಹಪರವೇ ಇರದ ಕುಸ್ತಿಪಟು
ಭ್ರಮೆಯೊಂದಿಗೆ ಗುದ್ದಾಟ ಬಿಟ್ಟು
ಸತ್ಯದ ಕನ್ನಡಿ ಹಿಡಿದು ಮುನ್ನುಡಿ ಬರೆಯಬೇಕು..

ಕಲ್ಪನೆಯ ರಣರಂಗದಲ್ಲಿ
ಕಂಬನಿ ಗುರಾಣಿಯಾಗಲಾರದು
ಕಾಣದ ಕೈ ಗಳು ಶತ್ರುವನಂತೆ ಕಂಡು
ಭ್ರಮೆಯ ಬದುಕಿಗೆ ಭವ್ಯ ಬಂಗಲೆಯಾದವು..

ಮುಗಿಯದ ನಿರಾಸೆ
ಮಾಗದ ಹತಾಶೆ
ಮೊಗದ ನಗುವ ಕದ್ದು
ಮುಗಿದ ಅಧ್ಯಾಯವೆಂದಾವು..

ಮನದ ಹಿಡಿತವು
ಭ್ರಮೆಯು ಕಳಚಿ
ಕಲ್ಪನೆಗೆ ಇಹಪರದ ಕಲ್ಲೆಸೆದು
ಪರಿವೆ ಇರದ ಜಗದಿಂದೆಳೆಯಿತು..

ಕಲ್ಪನೆಯೆಂಬ ಕುದುರೆ
ವಾಸ್ತವಗಿಂತ ಕಠೋರ
ವಾಸ್ತವವೆಂಬುದು ಬಲು ನಿಷ್ಠುರ
ಕಲ್ಪನೆಯು ವಾಸ್ತವಗಿಂತ ದೂರ ದೂರ..

ಕಲ್ಪನೆಯ ಕೂಸಿಗೆ
ವಾಸ್ತವದ ಕುಲಾವಿಯೊಂದಿರಲಿ
ಕಲ್ಪನೆಗೆ ವಾಸ್ತವವೇ
ವಸ್ತುನಿಷ್ಠವೆಂಬ ಅರಿವಿರಲಿ.

*ರಮೇಶ್ ಹಡಪದ*