...

5 views

ಯುಗಾದಿಯಲ್ಲಿ ಹೊಸತನವೇ ಚಂದ
ಶೀರ್ಷಿಕೆ: ಯುಗಾದಿಯಲ್ಲಿ ಹೊಸತನವೇ ಚಂದ
*****************************************

ಯುಗ ಯುಗಾದಿಯೆಂಬ ಸಂಭ್ರಮದ ಕೂಗು
ಆಹಾ ಪ್ರಕೃತಿಯು ಎಷ್ಟೊಂದು ಸೊಬಗು
ಮಾಮರದಲ್ಲಿ ಹೊನ್ನ ಹೂವ ನಗುವೇ ನಗು
ಹಸಿರು ಮಿಡಿ ಮಾವಿನಕಾಯಿಗಳ ಮೆರುಗು//

ಕೇಳುತ್ತಿದೆ ಕೋಗಿಲೆಯ ಕಂಠನಾದ
ಬಗೆ ಬಗೆ ಹಕ್ಕಿಗಳ ಸ್ವರ ಸಂವೇದ
ಭೂತಾಯಿಯೆಂದೂ ಮಾಡಲ್ಲ ಭೇದ
ಪ್ರಕೃತಿಯಲ್ಲಿ ಇಲ್ಲವೆಂದೂ ವಾದ ವಿವಾದ//

ಯುಗಾದಿಯಲ್ಲಿ ಹೊಸತನವೇ ಚಂದ
ಬೇವು ಬೆಲ್ಲ ಸವಿಯುವುದೇ ಪರಮಾನಂದ
ಒಟ್ಟಾಗಿ ಸೇರಿ ಸಂಭ್ರಮಿಸುವುದೇ ನಮಗಾನಂದ
ನವ ನವೀನತೆಯಲ್ಲಿ ಬೆಳಗಲಿ ಹೊಸಬಂಧ//

ಹೊಸ ಸಂವತ್ಸರಕ್ಕೆ ಹೊಸ ಕನಸು ಚಿಗುರಿಸುತ
ಮನದಲ್ಲಿ ಖುಷಿಭಾವ ತುಂಬುತ
ಭಕ್ತಿ ಭಾವದಲ್ಲಿ ದೇವರ ಬೇಡುತ
ಸಾಗುವ ಮುಂದಕ್ಕೆ ಖುಷಿಯ ಬಯಸುತ//

ನೋವು, ಬಾವುಗಳೆಂದೂ ಮರೆಯಾಗಲಿ
ಅಶಾಂತಿ ದೂರವಾಗಿ ಶಾಂತಿ ನೆಲೆಯಾಗಲಿ
ಕಷ್ಟ, ಬಡತನವು ಮಾಯವಾಗಲಿ
ಸಿರಿ, ಸಮೃದ್ಧಿಯೇ ಸದಾ ಝೇಂಕರಿಸಲಿ//

ಸವಿತಾ ಸತೀಶ್ ಶೆಟ್ಟಿ ✍️