...

14 views

ನೆಂಟರು
ಬರಬೇಕು ನೆಂಟರು ವರ್ಷಕ್ಕೊಮ್ಮೆಯಾದರೂ ಬಿರು ಬೇಸಿಗೆಯ ಹನಿ ಮಳೆಯಂತೆ, ಅಂಗಳದಲ್ಲಿ ಸಾರಿಸುವ ಸಗಣಿಯ ನೆನಪಿಸಲು ಮನೆಯಲ್ಲಿನ ಕಸದೊಂದಿಗೆ ಮನದ ದುಗುಡವ ಮರೆಮಾಚಲು, ವರ್ಷಕ್ಕೊಮ್ಮೆಯಾದರೂ ಬರ ಬೇಕು.
ಬರುವಾಗ ಒಂದಿಷ್ಟು ನೆನಪುಗಳ ಬುತ್ತಿಯೊಂದಿಗೆ, ಕೈಯಲ್ಲಿ ಒಂದಿಷ್ಟು ತಿಂಡಿ ತಿನಿಸಿ ನೊಂದಿಗೆ ಬರಬೇಕು ನೆಂಟರು ವರ್ಷಕ್ಕೊಮ್ಮೆ.
ತವರು ಮನೆಯವರಾದರೆ ಒಂದಿಷ್ಟು ಅಕ್ಕರೆ, ಅಡಿಗೆ ಮನೆಯಲ್ಲಿ ಒಗ್ಗರಣೆ,ಮಿಕ್ಕಿದ್ದೆಲ್ಲ ಸಕ್ಕರೆ, ಒಂದು ಹಿಡಿ ಜಾಸ್ತಿನೇ ಪ್ರೀತಿ ಅವರಿಗಲ್ಲಿ...
ಉಳಿದಂತೆ ಮಾಮೂಲು ಬೇರೆ ನೆಂಟರಿಗೆ, ಬರಿ ಒಂದಿಷ್ಟು ಹರಟೆ ಕಥೆಯೊಂದಿಗೆ... ಬರಬೇಕು ನೆಂಟರು ವರ್ಷಕ್ಕೊಮ್ಮೆ.
- ಶ್ರೀವಿ -