ಹದಿಹರೆಯದ ವಯಸ್ಸಿಗೆ ಕಡಿವಾಣವಿಲಿ ಮಾಡಿದ ತಪ್ಪಿಗೆ ಕ್ಷಮೆ ಇರಲಿ
ಹದಿಹರೆಯದ ವಯಸ್ಸು
ನೂರು ಆಸೆಯ ಬಂಧಿ
ವ್ಯಸನದ ದಾರಿ ಹಿಡಿಯಲು
ಹಿಂದಕ್ಕೆ ಕರೆವರೇ ವೈರಿ
ಕಂಡ ಹೊಸತರ ಮೇಲೆ
ಬಿಡಿಸಲಾರದ ಸೆಳೆತ
ಅತ್ತಲೇ ಸೆಳೆವ ಹುಚ್ಚು ಮನಸ್ಸು
ಪ್ರೀತಿ ಪ್ರೇಮವೇ ಆಕರ್ಷಣೆಯು
ಪ್ರೇಮವೆಂಬ ಮನದ ಮಾತಿಗೆ
ಮರುಳಾದ ಬದುಕು
ಬುದ್ದಿ ಬರುವ ಮುನ್ನ
ಬದುಕ ದಾರಿಯ ಬಿಟ್ಟಿತ್ತು
ಅಪ್ಪ ಅಮ್ಮನೆ ವೈರಿ
ಅವಳ ಭಯವೇ ಬಂಧನ
ಅಪ್ಪನೇ ರಾಕ್ಷಸ ಬದುಕ ಬಿಡನು...!!
ತಂದೆ ತಾಯಿಯ ಭಯವು
ತಿಳಿಯುವುದೇ ಸಿಡುಕು ಮನ
ಕೈಸುಟ್ಟ ಮೇಲೆಯೇ
ಅಮ್ಮನ ನೆನಪು ..!!
ಬುದ್ದಿ ಮಾತುಗಳೆಲ್ಲ
ತಲೆಯ ಮೇಲಿನ ಕಲ್ಲಂತೆ
ಬೀದಿ ದಾಸಯ್ಯರೇ ಗುರುಗಳು
ಹೇಳಿ ಕೊಟ್ಟಿದ್ದೇ ಪಾಠ
ಮಹಾನ್ ಸಜ್ಜನರು...!!
ಸೆಳೆಯುವ ನೂರು ಚಟದಿ ಕರೆದೊಯ್ಯುವ ಜನರು ನಿನಗಾಗೆ ಬಲೆಯನ್ನೇ ಹಣೆದಿಹರು..!!
ಸಕ್ಕರೆಯಿಟ್ಟು ಇರುವೆ ಕರೆವಂತೆ ನೀ ಸಿಲುಕಿದ ಮೇಲೆ ನಿನ್ನದೇ ಡಂಗೂರ ನಿನ್ನವರ ಕಿವಿಗೆ..!!
ಬಿಸಿತುಪ್ಪವ ತೆಗೆದು ಗಂಟಲಲಿ ಹೊಯ್ವಂತೆ ಬದುಕೋ ಸಾವೋ ಹರೆಯದಲೇ ಗುರುತಿಸು ನೀ
ನಿನ್ನ ಮನದ ಹಿಡಿತ ಮೆದುಳಲ್ಲಿರಲಿ...!!
© ಸವ್ಯಸಾಚಿ ✍️
ನೂರು ಆಸೆಯ ಬಂಧಿ
ವ್ಯಸನದ ದಾರಿ ಹಿಡಿಯಲು
ಹಿಂದಕ್ಕೆ ಕರೆವರೇ ವೈರಿ
ಕಂಡ ಹೊಸತರ ಮೇಲೆ
ಬಿಡಿಸಲಾರದ ಸೆಳೆತ
ಅತ್ತಲೇ ಸೆಳೆವ ಹುಚ್ಚು ಮನಸ್ಸು
ಪ್ರೀತಿ ಪ್ರೇಮವೇ ಆಕರ್ಷಣೆಯು
ಪ್ರೇಮವೆಂಬ ಮನದ ಮಾತಿಗೆ
ಮರುಳಾದ ಬದುಕು
ಬುದ್ದಿ ಬರುವ ಮುನ್ನ
ಬದುಕ ದಾರಿಯ ಬಿಟ್ಟಿತ್ತು
ಅಪ್ಪ ಅಮ್ಮನೆ ವೈರಿ
ಅವಳ ಭಯವೇ ಬಂಧನ
ಅಪ್ಪನೇ ರಾಕ್ಷಸ ಬದುಕ ಬಿಡನು...!!
ತಂದೆ ತಾಯಿಯ ಭಯವು
ತಿಳಿಯುವುದೇ ಸಿಡುಕು ಮನ
ಕೈಸುಟ್ಟ ಮೇಲೆಯೇ
ಅಮ್ಮನ ನೆನಪು ..!!
ಬುದ್ದಿ ಮಾತುಗಳೆಲ್ಲ
ತಲೆಯ ಮೇಲಿನ ಕಲ್ಲಂತೆ
ಬೀದಿ ದಾಸಯ್ಯರೇ ಗುರುಗಳು
ಹೇಳಿ ಕೊಟ್ಟಿದ್ದೇ ಪಾಠ
ಮಹಾನ್ ಸಜ್ಜನರು...!!
ಸೆಳೆಯುವ ನೂರು ಚಟದಿ ಕರೆದೊಯ್ಯುವ ಜನರು ನಿನಗಾಗೆ ಬಲೆಯನ್ನೇ ಹಣೆದಿಹರು..!!
ಸಕ್ಕರೆಯಿಟ್ಟು ಇರುವೆ ಕರೆವಂತೆ ನೀ ಸಿಲುಕಿದ ಮೇಲೆ ನಿನ್ನದೇ ಡಂಗೂರ ನಿನ್ನವರ ಕಿವಿಗೆ..!!
ಬಿಸಿತುಪ್ಪವ ತೆಗೆದು ಗಂಟಲಲಿ ಹೊಯ್ವಂತೆ ಬದುಕೋ ಸಾವೋ ಹರೆಯದಲೇ ಗುರುತಿಸು ನೀ
ನಿನ್ನ ಮನದ ಹಿಡಿತ ಮೆದುಳಲ್ಲಿರಲಿ...!!
© ಸವ್ಯಸಾಚಿ ✍️