...

4 views

ಪಯಣ
**

ಮಡಿಲಲಿ ಮುಗ್ಧ ಮಗುವಾಗಿದ್ದೆವು ಹುಟ್ಟಿದಾಗ
ಬೆಳೆಯುತ್ತ ಹೆಗಲಾದೆವು ಜನ್ಮ ಕೊಟ್ಟ ತಂದೆಗಾಗ

ಕನಸುಗಳನು ಬಿತ್ತಿದೆವು ಅಣ್ಣನೊಟ್ಟಿಗೆ ನಾವಾಗ
ಸಂಭ್ರಮದಿ ಸಾಗುತಲಿತ್ತು ನಮ್ಮ ಪಯಣವಾಗ

ಸ್ವಾರ್ಥ ದುರಾಸೆ ಬುದ್ಧಿ ಇರಲಿಲ್ಲ ನಮ್ಮೆದೆಯಾಗ
ಪ್ರೀತಿ ತ್ಯಾಗ ತುಂಬಿ ತುಳುಕುತಿತ್ತು ಜೀವನದಾಗ

ಸೋಲು ಗೆಲುವಲ್ಲು ಎಲ್ಲಾ ಭಾಗಿಯಾಗುವರಾಗ
ಕೇಳದೆಯೇ ಸಹಾಯಹಸ್ತವನ್ನು ನೀಡುವರಾಗ

ಬೆಳವಣಿಗೆ ಹಂತದಲಿ ಬದಲಾಯಿತು ಮನಗಳು
ಲೆಕ್ಕಾಚಾರದ ಭಾವವನು ತುಂಬಿರುವ ಜನಗಳು

ದಯೆ ಧರ್ಮವೆಂಬುವುದು ಇಲ್ಲಿ ಬಾಯಿಮಾತು
ಪಾಲಿಸುವರಿಲ್ಲ ಯುಗದಿ ಈ ತತ್ವಕ್ಕೆ ಮನಸೋತು

✍️ ಸೂಗಮ್ಮ ಡಿ ಪಾಟೀಲ್
ಉತ್ನಾಳ್