...

8 views

ಕಲಿಪುರುಷ
ಯಾರೋ ನೀನು ಯಾರೋ ನೀನು
ನೀನು ಬರಲು ಮಿಂಚು ಸಿಡಿಲು
ಗಡಗಡನೆ ಗುಡುಗುತಿರಲು
ನಿನ್ನ ವೇಗ ವಾಯು ವೇಗ
ತಡೆಯೋರ್ಯಾರು ನಿನ್ನ ಈಗ 
ಅಗ್ನಿಜ್ವಾಲೆ ಕಣ್ಣಲಿರಲು 
ಸಿಗಿವ ರೋಷ ಮುಖದಲಿರಲು 
ಎಂಟೆದೆ ಗುಂಡಿಗೆ ತಟ್ಟಿ 
ಸಿಡಿದೇಳುವವರ ಎದೆಯ ಸೀಳಿ 
ಆಕ್ರೋಶವು ಕೊನೆಯಾಗದೆ
ಆವೇಶ ಮಿತಿ ಮೀರಿದೆ 
ಎದುರಾಳಿಗಳ ಎದುರಲ್ಲಿ 
ಬಿರುಗಾಳಿಯಂತೆ ಅಬ್ಬರಿಸಿ 
ಧೀರ ಶೂರರೆದೆಯಲಿ
ಸಿಂಹ ಸ್ವಪ್ನವಾಗಿರಲು 
ಕೆಚ್ಚೆದೆಯು ನಡುಗಿದೆ
ನಿನ್ನ ಎದುರು ನಿಲ್ಲಲು.......................
_____________________________

ಯಾರೋ ನೀನು ಯಾರೋ ನೀನು 
ನೀನು ಬರಲು ಮಿಂಚು ಸಿಡಿಲು 
ಗಡಗಡನೆ ಗುಡುಗುತಿರಲು
ಕ್ರೋಧವೆಂಬ ಖಡ್ಗ ಹಿಡಿದು 
ವಿಜಯವೆಂಬ ಕುದುರೆ ಏರಿ
ಕಲ್ಕಿಯಂತೆ ಬರುತಿರಲು 
ನಿನ್ನ ವೇಗ ವಾಯು ವೇಗ
ತಡೆಯೋರ್ಯಾರು ನಿನ್ನ ಈಗ
ಅಬ್ಬರಿಸಿ ಬೊಬ್ಬಿರಿದು
ಕೆರಳಿದ ಸಿಂಹದಂತೆ 
ವೈರಿಗಳ ಬಲಿಗಾಗಿ
ಕಾದಿರುವ ಹುಲಿಯಂತೆ
ಅಡ್ಡಗಟ್ಟಿದವರ 
ತುಳಿಯುವ ಮದಕರಿಯಂತೆ
ಎದುರಾಳಿಗಳ ಕಾಡಿ
ಸಿಡಿಯುವ ಕಿಡಿಯಂತೆ 
ಕೆಣಕಿದವರ ಕೆಡವಿ ನಿಂತ
ನಿನ್ನ ರೋಷ ಕಂಡೊಡನೆ
ಮೈ ನಡುಗುತಿರಲು...........................

ಯಾರೋ ಯಾರೋ ಯಾರೋ ಯಾರೋ...
ಯಾರೋ ಯಾರೋ ಯಾರೋ ನೀನು 
ನೀನು ಬರಲು ಮಿಂಚು ಸಿಡಿಲು
ಗಡಗಡನೆ ಗುಡುಗುತಿರಲು................

© chethan_kumar