...

9 views

ನವಕನಸಿನ ಇರುಳು..
ತಂಪನೇಯ ಈ ಇರುಳ ಸಮಯ
ಮಲ್ಲಿಗೆ ಮುಡಿದು ನಾನಿಂತಿರುವೆ ಗೆಳೆಯ...

ನವಕನಸುಗಳಲೇ ನಾನೀಗ ತನ್ಮಯ
ರೋಮಾಂಚನದಿ ಮೈಮರೆತಿರುವೆ ಇನಿಯ...

ಮೆಲ್ಲನೆ ನನ್ನಾವರಿಸಿ ಬಿಗಿದಪ್ಪಿಬಿಡು ನನ್ನಿನಿಯ
ನಿನ್ನಲೇ ಬೆರೆತು ಕನಸುಗಳ ಬಿತ್ತುವೆ ನೀ ಕೇಳಯ...

ಬಳಿಬಂದು ಬಯಕೆಗಳ ನೀ ತಣಿಸುವೆಯ
ನವಿರಾಗಿ ನನ್ನಧರಗಳಿಗೆ ಒಮ್ಮೆ ಚುಂಬಿಸುವೆಯ...

ಈ ರಾತ್ರಿಯ ಲಜ್ಜೆಗೆ ಜಾಗವೇ ಇಲ್ಲದಯ
ಬಿಸಿಯುಸಿರ ಸೇರಿಸಿ ಸೋಕಿಸಿ ಸಂತೈಸು ಬಾರಯ...

#Kannada #kannadapoem #vijaykumarvm #ವಿಬೆಣ್ಣೆ

© ವಿಜು ✍ 💞