...

6 views

ಅನ್ನದಾತ ಪುಣ್ಯದಾತ
ನೆತ್ತಿ ಸುಡುವ ಬಿಸಿಲೊಳಗೆ ಧಣಿದು
ತುತ್ತು ಅನ್ನ ನೀಡಿದನು
ಕತ್ತಿಯಂಚಿನ ನಡೆಗೆಯವನದು ಸಾಲದೊಳಗೆ, ಈ ಧರಣಿಯೊಳಗೆ
ಹೊತ್ತು ಗೊತ್ತಿಲ್ಲದೆ ಮೂರ್ಹೊತ್ತು ಜೀವ ಸವೆದನು ಬಳುವಳಿಯಾಗಿ ಬಂದ ಒಕ್ಕಲುತನದೊಳಗೆ..

ಅನ್ನದಾತನೆಂದು ಹೊಗಳಿದರು
ಕಣ್ಣು ಹಾಯಿಸದೆ ನಡೆದವರು
ಬೆನ್ನೆಲುಬೆಂದರೂ ಬೆನ್ನು ಹಿಂದೆ ಇರದವರು

ಬಿತ್ತಿದ ಬೆಳೆಗೂ,ಬತ್ತದ ನೋವಿಗೂ
ಒಮ್ಮೊಮ್ಮೆ ಮಳೆಯ ಚೆಲ್ಲಾಟ
ಎಲ್ಲೆಂದರಲ್ಲಿ ಸುತ್ತುವರಿದು
ಕಾಡುವ ಎದಲ್ಲಾಳಿ ಕಾಟ.

ಬೆಳೆದ ಬೆಳೆಯ ಸಾಲ ಎದೆಯುದ್ದ
ಉಳಿದಿದ್ದು ಮಾತ್ರ ಮೊಣಕಾಲುದ್ದ
ಸುಡುವ ಬಿಸಿಲಿಗೆ ,ಹರಿದ ಬೆವರಿಗೆ
ಅನ್ನದಾತನ ಖುಷಿ ಮಾರುದ್ದ..

ಅನ್ನದಾತನೇ ನಿನಗೆ ನಮನ..
🙏🙏🙏🙏🙏🙏🙏