...

17 views

ಚಿತ್ರ ಕವನ: ಸಾಧನೆಯೆಂಬ ಬೇಟೆ
ಸಾಧನೆಯೆಂಬ ಬೇಟೆ
_____________________
ನಮ್ಮ ಬದುಕೊಂದು ಸಾಧನೆಯ ಪಾಠ
ಮೈದಾನಕ್ಕೆ ಇಳಿದು ಆಡಲೇಬೇಕು ಆಟ
ಮನಸಿಟ್ಟು ಗುರಿ ಕಡೆಗೆ ಇಡಬೇಕು ನೋಟ
ಮನದೊಳಗೆ ಸೋಲು ಗೆಲುವಿನ ಕಾದಾಟ
ಆದರೂ ನಮ್ಮಲ್ಲಿರಬೇಕು ಗೆಲುವೆಂಬ ಹಠ
ಆಗಲೇ ಶುರುವಾಗುವುದು ಸಾಧಿಸುವ ಓಟ//

ಆಗ ಕೆಲವರು ಬರುವರು ನಮ್ಮ ಬೆಂಗಾವಲಾಗಿ
ಇನ್ನೂ ಹಲವರು ಕಾಲೆಳೆಯುವುದಕ್ಕಾಗಿ
ಯಾರೇ ಬರಲಿ ನಾವು ಹೊರಟದ್ದು ಸಾಧನೆಗಾಗಿ
ಸತ್ಯವೆಂಬ ನಿತ್ಯ ಹೋರಾಟದ ಹಾದಿಗಾಗಿ
ನಾವಾಗಿರಬೇಕು ಅಲ್ಲಿ ಹೊಳೆಯುವ ಬೆಳಕಾಗಿ
ಸಿಗುವುದಾಗ ಮನಸ್ಸಿಗೆ ನೆಮ್ಮದಿಯು ತಂಪಾಗಿ//

ಸಾಧನೆ ಎಂಬ ಬೇಟೆಯಲ್ಲಿ ಪಟ್ಟೆವು ತ್ರಾಸ
ಮುಂದಿಟ್ಟ ಹೆಜ್ಜೆಗೆಂದೂ ಆಗಲಿಲ್ಲ ಮೋಸ
ನಮ್ಮೆಲ್ಲರ ಜೀವನವೇ ಬಲು ವಿಪರ್ಯಾಸ
ಇಟ್ಟ ಗುರಿಯ ತಲುಪಿದಾಗ ಮನಸ್ಸಿಗೇನೋ ಉಲ್ಲಾಸ
ಪಟ್ಟ ಪರಿಶ್ರಮಕ್ಕೆ ಸಿಕ್ಕಿತು ಯಶಸ್ಸೆಂಬ ಸಂತಸ
ಬದುಕಲ್ಲಿ ತುಂಬಿತು ದಿನವೂ ಹರುಷ ಹರುಷ//