...

3 views

ಅಲೆಯ ತಳಮಳ
ಅಲೆಯ ತಳಮಳಕೆ
ನೆಲೆ ಕೊನೆಗೂ ಕಾಣಲಿಲ್ಲ
ಬಲೆಯೊಳಗಿನ ಮತ್ಸ್ಯ ದಂತೆ
ತಲೆಯೆತ್ತುತ್ತ ಜಿಗಿಯುವಂತೆ...

ಎಂದಾದರೂ ಸರಿ ದಡ
ಸೇರುವೆನೆಂಬ ಹುಚ್ಚು ಬಯಕೆ
ಮುಂದಿನಲೆ ಬಂದು ದಡ ಮುತ್ತಿಕ್ಕುವ ಮೊದಲೆ
ಹಿಂದಿನಲೆ ಬಂದು ತಂದು ಹಾಕುವುದಲ್ಲ ಕೊಕ್ಕೆ
ಕಂಬನಿಗೈಯ್ಯುತ್ತಲೇ ಅಲೆ ಕತ್ತರಿಸಿಕೊಂಡಿತಲ್ಲ ರೆಕ್ಕೆ..

ಸಾಗರದಾಳದೊಳಗೆ
ಅಬ್ಬರದಲೆಗಳು
ತಬ್ಬುವವರಿಲ್ಲ ದಡದಂತೆ
ಅತ್ತಿತ್ತ ದೂಡಿದಂತೆ
ದಡಕ್ಕಾಗಿ ತಡಕಾಡಿದಂತೆ..

ಮುತ್ತಿಕ್ಕುವ ಬರದಲ್ಲಿ
ಹೊತ್ತೊಯ್ಯುವ ರಬಸದಲೆ
ಹೊಂಚು ಹಾಕಿ ಕುಳಿತಿದೆ
ಅಲೆಯ ಎದೆಯೊಳಗೆ..

*ರಮೇಶ್ ಹಡಪದ*