...

16 views

ಸೋನೆ ಮಳೆ..
ತಂಪಾದ ತಂಗಾಳಿಗೂ
ನನ್ನನೇ ಸೋಕುವಾಸೆ.,
ಸುರಿವ ಸೋನೆಮಳೆಗೂ
ನನ್ನೇ ಚುಂಬಿಸುವಾಸೆ.,
ನನ್ನೀ ಕೋಮಲ
ತನುವನು ಬಿಗಿದಪ್ಪುವಾಸೆ...

ನಮಗಾರ ಹಂಗಿನ ಭಯವಿಲ್ಲ
ಸುತ್ತಲೂ ಯಾರಿಲ್ಲ.,
ಇನಿಯ ಏನಿದೆಲ್ಲ
ಯಾವುದೋ ಸೆಳೆತಕೆ ಸಿಲುಕಿಹೆನಲ್ಲ.,
ತನುವೀಗ ಬಿಗಿಯಾಗಿ
ನಿನ್ನ ಬರಸೆಳೆಯುತಿದೆಯಲ್ಲ...

ಮಾತುಗಳೇ ಬರದಂತೆ
ತನುವೆಲ್ಲ ನಡುಗುತಿದೆಯಲ್ಲ.,
ನಿನ್ನ ತುಟಿ ಸೋಕಿ
ನನ್ನ ಮೈಯೆಲ್ಲಾ ಬಿಸಿಯಾಗುತಿದೆಯಲ್ಲ.,
ನನ್ನೆಲ್ಲ ಲಜ್ಜೆ ಮರೆತು
ನಿನ್ನಲೇ ನಾನೀಗ ಬೆರೆಯುತಿಹೆನಲ್ಲ...

ನಮ್ಮೀ ಸಮ್ಮಿಲನಕೆ
ಮಳೆಯೂ ನಾಚಿದೆಯಲ್ಲ.,
ನಮ್ಮಯ ತನುವೆಲ್ಲ
ಹಗುರಾಗಿ ತಂಪಾಗಿದೆಯಲ್ಲ.,
ಮತ್ತೊಮ್ಮೆ ಮೊಗ್ಗಾಗಿ
ಅರಳುವಾಸೆಯಾಗಿದೆಯಲ್ಲ.,
ಉಸಿರಿರುವತನಕ ನಿನ್ನಯ ತೋಳ ತೆಕ್ಕೆಯಲಿ
ಬದುಕುವ ಭರವಸೆಯೊಂದು ಮೂಡಿದೆಯಲ್ಲ...

#Kannada #kannadapoem #vijaykumarvm #ವಿಬೆಣ್ಣೆ

© ವಿಜು ✍ 💞