...

18 views

ಮುಂಜಾನೆಯ ಸೊಬಗು
ಹೊಂಬಣ್ಣದ ಹೊಂಗಿರಣಕೆ ನಾಚುತಿಹುದು ಇಳೆಯು
ಇಬ್ಬನಿಯ ಮೃದು ಸ್ಪರ್ಶಕೆ
ತೋಯುತಿಹುದು ಧರೆಯು
ಪಕ್ಷಿಗಳ ಇಂಪಾದ ಕಲರವಕೆ
ಕರ್ಣಗಳು ಸೋತಿಹುದು
ಮುಂಜಾನೆಯ ಪ್ರಕೃತಿ ಸೌಂದರ್ಯಕೆ
ನನ್ನೀ ಮನವು ಶರಣಾಗಿಹುದು