...

12 views

*ಕನಸು*
ಮರೀಚಿಕೆಯಾಗುವಷ್ಟು
ಕಾಣಬಾರದು ಕನಸು
ಕೈಗೆಟುಕುವಂತಿರಬೇಕು

ಹಗಲುಗನಸಾಗಬಾರದು
ಯಾವುದೇ ಕನಸು
ನನಸಾಗುವಂತಿರಬೇಕು

ಕನಸು ಕಾಣುವುದೇ
ಜೀವನವಾಗಬಾರದು
ನನಸಾಗಿಸಲು ಪ್ರಯತ್ನವಿರಬೇಕು

ಯಾವುದೇ ಕನಸಾಗಲಿ
ಜೀವನಕ್ಕೆ ಮಾರಕವಾಗಬಾರದು
ಪೂರಕವಾಗಿರಬೇಕು

ಕನಸ ಪೂರೈಸಲು
ಬೇಕು ಪರಿಶ್ರಮವು ತಾಳ್ಮೆಯು
ಜೊತೆಗೆ ಶುದ್ಧ ಮನಸು

© ಭಾರ್ಗವಿ ವರ್ಧನ್*(ಭಾವ)*✍🏻