...

9 views

ಕಟ್ಟಬೇಕಿದೆ ನನ್ನ ಕನ್ನಡ
ಉಳಿಕೆಯೆಂಬುದು ಬಳಸಿದಾಗಲ್ಲವೇ
ಭಾಷೆಯ ನಿತ್ಯ ಬಳಕೆಯು
ಅವಸಾನಕ್ಕೆ ಸೆಟೆದು ನಿಂತು ತನ್ನಿರುವು ತೋರಿತು..

ಬಳಸದೇ ಉಳಿಕೆ ,ಉಳಿಕೆ,ಎಂದು
ಹಳಸಿದ ಘೋಷಣೆಯೊಂದಿಗೆ
ಮಿಂದೆದ್ದರೆ ಅದ ಹೇಗೆ ತಾನೆ ಉಳಿದೀತು..

ಕಂಪು ಸೂಸುವ ನುಡಿಯು
ಸೊಂಪಾಗಿ ಬೆಳೆದು,ನಿಲ್ಲಬೇಕಿದೆ
ತಂಪು ತಂಗಾಳಿಯಂತೆ ಜಗವ ಹರಡಿ..

ದುರಾಸೆ,ದುರಾಲೋಚನೆ
ದೂರಾಗಬೇಕಿದೆ ದೂರುವವನಿಂದ
ದಾರಿ ಕಾಣದಾಗಿದೆ ಇವರೊಳ ಸಂಚಿನಿಂದ..

ಹಿಡಿ ಕೈ ಎಳೆಯೋಣ ರಥವ
ಬಿಡು ಸ್ವಾರ್ಥವ,
ತಿಳಿ ಎಲ್ಲ ಒಂದೇ ,ಇಂದೆ ಸಾಗು ಮುಂದೆ..

ಕಟ್ಟಬೇಕಾದವರೆ ಬಿಟ್ಟು ನಡೆದಿಹರು
ಅವರರವರ ಸಿದ್ದಾಂತದ ದಾಳ ಉರುಳಿಸಿ
ಅದೆಂತ ಅಭಿಮಾನ ಇವರದು
ಕೇಳಿದರೆ ಕುಂಟು ನೆಪದ ಪಟ್ಟಿಯೇ ದೊಡ್ಡದು..

ನಾಡು ನುಡಿಯ ಹೆಸರಿನಲ್ಲಿ
ಮುಖಹೊದ್ದು ಬರೀ ಕಿರುಚದಿರಿ
ತಲೆಯೆತ್ತಿ ಕನ್ನಡವೆಂದು ಸಾರಬೇಕಿದೆ ಮರೆಯದಿರಿ..


*ರಮೇಶ್ ಹಡಪದ*