...

21 views

ಅಂದದ ಗೆಳತಿ
🌹 *:ಅಂದದ ಗೆಳತಿ:* 🌹

*ಯಾರೀ... ಸುಂದರ ಯುವತಿ,*
*ಮನವನೇ ಕಾಡುವ ಈ ಗೆಳತಿ,*

*ಮಂದಹಾಸದ ನಗುವನು ಬೀರಿ,*
*ಚೆಲುವಿನಲ್ಲಿಯೇ ಗೆಲುವನು ತೋರಿ,*

*ಸೌಂದರ್ಯದಲಿ ಅಪ್ಸರೆ ಮೀರಿಸೋ,*
*ಪ್ರೀತಿಯ ಒಲವಲಿ ಎಲ್ಲರ ಸೋಲಿಸೋ,*

*ಸುಂದರ ಕಂಗಳ ಅಂದದ ತಾರೆ,*
*ಚಂದ್ರನ ನಾಚಿಸೋ ಚಂದ್ರಿಕೆ ನೀರೆ,*-

*ಹಸಿರು ವರ್ಣದ ಸೀರೆಯ ತೊಟ್ಟು,*
*ಹಣೆಯ ಮಧ್ಯದಿ ಕಿರು ಬೊಟ್ಟನು ಇಟ್ಟು,*

*ಜಂಗಮವಾಣಿಯ ಕರದಲಿ ಹಿಡಿದು,*
*ಕೊರಳಲಿ ಸುಂದರ ಸರವನೇ ಪಡೆದು,*

*ಯಾರಿಗಾಗಿಯೇ ಕಾದು ನಿಂತಿಹಳೋ,*
*ನಲ್ಮೆಯ ನಲ್ಲನ ಕೆಣಕುವ ತಿರುಳೋ,*

*ಒಂದೂ ಕಾಣೆನು ಈ ಅರಸಿಹ ಚೆಂದ,*
*ಸಾಂಪ್ರದಾಯಿಕ ಈ ಉಡುಗೆಯೇ ಅಂದ,*

*ಒಮ್ಮೆ ನೋಡಿದರೂ ಮತ್ತೊಮ್ಮೆ ನೋಡುವ,*
*ಮತ್ತೆ ನೋಡಲು ಮೊಗದೊಮ್ಮೆ ಕಾಣುವ,*

*ಹಂಬಲ ತುಂಬುವ ಗೆಳತಿಯೇ ಇವಳು,*
*ರಂಭೆ-ಊರ್ವಶಿಯರ ನಾಚಿಸುವವಳು,*

*ಪ್ರೀತಿಯ ಮಾತಲಿ ಹೇಳುವುದಾದರೆ,*
*ದೇವನ ಸೃಷ್ಟಿಯ "ಸಿರಿ" ಖನಿಯೇ ಇವಳು.

R....

© All Rights Reserved