...

20 views

ಬೆಳದಿಂಗಳ ಬಾಲೆ..🤍🤍
ಅನುರಾಗ ತುಂಬಿದ ಕಣ್ಣುಗಳಿಗೆ
ಕಣ್ಣೀರಿನ ರುಚಿ ತೋರಿಸಿದ
ದೇವತೆ ನೀನು.

ಕೈಗೆಟುಕದ ಹೂವಾಗಿ
ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸಿದ
ಚಂಚಲೆ ನೀನು.

ಪ್ರೀತಿ ಮಾತಿನ ಸೊಗಸಲ್ಲೇ
ನಂಬಿಸಿ ಕತ್ತು ಕೊಯ್ದ
ಸಕಲ ಕಲಾವಲ್ಲಬೇ ನೀನು.

ಗೆಲುವಲ್ಲೇ ಮೈಮರೆಯುವ ನನಗೆ
ಸೋಲಿನ ಪಾಠವನ್ನು ಕಲಿಸಿದ
ಗುರು ನೀನು.

ಕೇವಲ ನೆನಪುಗಳಲ್ಲಿ ಸುಳಿದಾಡುವ
ಬಿಟ್ಟು ಬಿಡದೇ ಕಾಡುವ
ಬೆಳದಿಂಗಳ ಬಾಲೆ ನೀನು...

ನಿನ್ನಂತವಳನ್ನು ಮರೆಯೋಕೆ ಆಗುತ್ತಾ....??

ಇಂತಿ ನಿನ್ನವ..❤️❤️

© All Rights Reserved