...

10 views

ಕುರಿಗಳು ಸಾರ್, ನಾವು ಕುರಿಗಳು

ಕುರಿಗಳು ಸಾರ್, ನಾವು ಕುರಿಗಳು


ಮುಗ್ದ ಅಮಾಯಕ ಜೀವಿಗಳು ನಾವು,
ನಿಷ್ಕಲ್ಮಷ ಪ್ರಾಣಿಗಳು
ನಿರ್ಮಲ ಹೃದಯದವರು ನಾವು,
ಸ್ವಾರ್ಥವನ್ನರಿಯದವರು ಶಾಂತ ಜೀವಿಗಳು
ತಮ್ಮವರನ್ನು ಅತಿಹೆಚ್ಚು ನಂಬುವವರು ನಾವು
ಕುರಿಗಳು ಸಾರ್, ನಾವು ಕುರಿಗಳು

ನಮ್ಮ ಉಣ್ಣೆಯನ್ನು ಕೊಟ್ಟು, ನಮ್ಮ ನಂಬಿದವರಿಗೆ ಬಾಳನ್ನು ಕೊಟ್ಟು, ನಿಸ್ವಾರ್ಥದಿಂದ ನಮ್ಮ ಪಾಡಿಗೆ ನಾವಿದ್ದರೂ,
ಹಂಗಿಸುವುದು ಏಕೆ ನಮ್ಮನ್ನು, ಕುರಿಗಳು ಬುದ್ಧಿಯಿಲ್ಲದ ಜೀವಿಗಳೆಂದು.
ನಿಷ್ಕಲ್ಮಷದಿಂದ ನಂಬುವುದು, ನಮ್ಮ ತಪ್ಪಾ?
ಮುಗ್ದತೆಯೇ ನಮ್ಮ ಪಾಪವಾ?
ಏನು ಮಾಡಿದೆವು ನಾವು ನಿಮಗೆ, ಯಾರಿಗೂ ಹಾನಿಮಾಡದ ನಾವು ಬರಿ
ಕುರಿಗಳು ಸಾರ್, ನಾವು ಕುರಿಗಳು

ನಮಗೆ ಮಾರ್ಗದರ್ಶನ ಮಾಡುವವನ ಮೇಲೆ, ನಮಗಿರುವ ಅಚಂಚಲ ನಂಬಿಕೆ, ನಿಮಗೆಲ್ಲಾ ಮೂರ್ಖತನದಂತೆ ಕಂಡರೇ, ನಾವೇನು ಮಾಡೋಣ...
ನಿಮ್ಮಂತೆ ನಂಬಿ ನಂಬದೆ ಬಾಳುವುದು ನಮಗೆ ತಿಳಿದಿಲ್ಲ, ನಂಬಿಕೆಯಿಂದಲೆ ಮುನ್ನಡೆವೆವು
ಕುರಿಗಳು ಸಾರ್, ನಾವು ಕುರಿಗಳು

ಒಗ್ಗಟ್ಟಿನ ಉದಾಹರಣೆಯಾಗಿ ತೋರುವರು ಇರುವೆಯನು, ಜೇನುಹುಳವನು,
ನಮ್ಮಲ್ಲಿರುವ ಒಗ್ಗಟ್ಟು ಯಾರಲ್ಲೂ ಇರಲಾರದು, ಸಾವಲ್ಲು ಒಗ್ಗಟ್ಟಿನಿಂದ ಮುನ್ನಡೆವೆವು...
ಆದರು ಅನ್ನುವರು ಆಡುವರು ಕುರಿಗಳೆಂದು, ಮಂದಮತಿಗಳೆಂದು,
ತಲೆಯೆತ್ತಿ ವಾಸ್ತವತೆಯ ನೋಡದ ಅಂಧರೆಂದು, ಏನು ಮಾಡೋಣ
ಕುರಿಗಳು ಸಾರ್, ನಾವು ಕುರಿಗಳು

ಕುರಿಗಳು ಸಾರ್, ನಾವು ಕುರಿಗಳು..
ಮುಗ್ದ ಅಮಾಯಕ ಜೀವಿಗಳು,
ನಿಷ್ಕಲ್ಮಷ ಪ್ರಾಣಿಗಳು,
ಸ್ವಾರ್ಥವನ್ನರಿಯದ ಶಾಂತ ಮೂರ್ತಿಗಳು...



© All Rights Reserved