...

10 views

ನೀನಿರುವೆಯಾ ನನ್ನಲ್ಲಿ..?
ನಾನಿರುವೆ ನಿನ್ನಲ್ಲಿ
ನೀನಿರುವೆಯಾ ನನ್ನಲ್ಲಿ

ನೀನಿಲ್ಲದೆ ನಾ ಬರಿ
ಮಾಂಸ ಮುದ್ದೆಗಳ ತುಂಡು

ಈ ತುಂಡನ್ನು ತೆಕ್ಕೆ ಬಡಿದು
ತುಂಬು ಪ್ರೀತಿಯೆಂಬ ಜೀವವನ್ನು

ತುಂಬು ನಿನ್ನೆಸರಿನ ಉಸಿರನ್ನು
ತುಂಬು ಯಾರು ತುಂಬದ ಸ್ಥಾನವನ್ನು

ನೀನಿರುವೆ ನನ್ನಲ್ಲಿ
ಸದಾ ಹರಿಯೋ ನದಿಯಂತೆ

ಬತ್ತದಿರಲಿ ಪ್ರೀತಿಯ ನದಿಯು
ಬತ್ತಿದರೆ ಹೊತ್ತಿ ಉರಿದು

ಸುಟ್ಟು ಬೂದಿಯಾಗುವುದು
ಈ ಪ್ರೀತಿಯೆಂಬ ಮುದ್ದು ಮನವು

ನಾನಿರುವೆ ನಿನ್ನಲ್ಲಿ
ನೀನಿರುವೆಯಾ ನನ್ನಲ್ಲಿ?

~ ನಾನ್ಯಾರು ✍️