...

3 views

ಗಾಢತೆಯ ಸೌಂದರ್ಯ
ನೆನಪಿನಳಿವ ತೆರೆ  ಸರಿದಾಗ  ಶಕ್ತಿಸಂಚಯ
ವಿಚ್ಛಿನ್ನವಾಗದೆಯೆ ಕುಡಿಯೊಡೆಯದು!
ಮೂಲರೂಪ ಸರಿಸಿಯೇ ಹೊಸದರ  ಜನ್ಮ. 
ತಪನನ  ಗಾಢ ತಾಪವಿರದೇ  ಸೃಷ್ಟಿಯ ಉಳಿವಿರದು.!!

ಶಿಶಿರದ ಪರ್ಣ ವಸುಧೆಯೊಡಲ  ಅಪ್ಪಿದಾಗಲೇ
ವಸಂತದ ನವ ಪಲ್ಲವ!
ಧರಣಿಯ ಧಗೆಯ ದಾಹತಂಪಾಗಿಸಲೇ ಅಕ್ಷಜದವರ್ಷ!!

ಇಂಗಿದ ಆಚ್ಛೋದಕದ ಹೊಸ ಹರಿವು.
ಧರೆಯಗೆದು ಉಳುಮೆಯಲಿ ಕುಡಿಯೊಡೆವ ಅಗೆ!
ಅಳಿದ ಕರಿಮುಗಿಲಿನಡಿಯಲಿ ಒಡನಾಡಿಯಾಯ್ತು
ಪರಪುಟ್ಟನ ವಸಂತಗಾನ.!!

               ✍️ ರಶ್ಮಿ ಭಟ್.