👬 ಮಕ್ಕಳೆ ರಾಷ್ಟ್ರದ ಸಂಪತ್ತು 👭
ಮಕ್ಕಳ ಮನಸು ಕಾಣಲಿ ಸುಂದರ ಕನಸು
ಮಕ್ಕಳ ಕನಸು ನಗುವಿನ ಮುಗ್ಧ ಮನಸು.!
ಮಕ್ಕಳು ನಮ್ಮ ರಾಷ್ಟ್ರದ ಅಮೂಲ್ಯ ಸಂಪತ್ತು
ಪ್ರತಿಭೆಯ ಗುರುತಿಸಿ ಅಭಿನಂದಿಸಿ ಯಾವತ್ತು.!
ಮಕ್ಕಳು ಅರಳುವ ಸುಂದರ ಹೂವುಗಳು
ಅರಳುವ ಮುನ್ನವೇ ಚಿವುಟದಿರಿ ಕನಸುಗಳು.!
ಮಕ್ಕಳಲ್ಲಿ ಯೋಚಿಸುವ ಮನೋಭಾವ ಬೆಳಸಿ
ಆಸಕ್ತಿ ವಿಷಯಗಳಿಗೆ ನೀರೆರೆದು ಪೋಷಿಸಿ.!
ಕಲಿಕೆಯಲ್ಲಿ ಪ್ರಶ್ನೆಯ ಕುತೂಹಲ ಕೆರಳಿಸಿ
ಜ್ಞಾನದ ಅರಿವನ್ನು ಬಾಲ್ಯದಲ್ಲಿ ಮೂಡಿಸಿ.!
ಜೀವನದಲ್ಲಿ ಕನಸು ಕಾಣಲು ಪ್ರೇರೇಪಿಸಿ
ಕಲಿಕೆಯ ಜೊತೆ ಮುಟ್ಟುವ ಗುರಿ ತಲುಪಿಸಿ.!
ಮಧುರ ಭಾವನೆಗಳನ್ನು ಒಲವಿಂದ ಪ್ರಚೋದಿಸಿ
ಕಾಣುವ ಕಲ್ಪನೆಯ ಲೋಕವನ್ನ ಸೃಷ್ಟಿಸಿ.!
ಮನದ ಆಸೆಗಳನ್ನು ಸಂದರ್ಭಕ್ಕೆ ನೆರವೇರಿಸಿ
ಮುಖಾಮುಖಿ ವಿಚಾರ ವಿನಿಮಯ ಮಾಡಿಸಿ.!
ಸಮಾಜದ ವಾಸ್ತವ ಘಟನೆಗಳ ಬಗ್ಗೆ ವಿವರಿಸಿ
ಸುಂದರ ವ್ಯಕ್ತಿತ್ವ ಗುಣಗಳನ್ನು ರೂಪಿಸಿ.!
ಮಕ್ಕಳಲ್ಲಿ ಪ್ರಯತ್ನ ಮಾಡುವುದನ್ನ ರೂಡಿಸಿ
ಸರಿ ತಪ್ಪುಗಳ ಬಗ್ಗೆ ಅರಿವನ್ನ ತಿಳಿಸಿ.!
ಗುರು ಹಿರಿಯರನ್ನು ಗೌರವಿಸುವುದನ್ನ ಕಲಿಸಿ
ಸಹಾಯ ಮಾಡುವ ಮನೋಗುಣವನ್ನ ವೃದ್ಧಿಸಿ.!
ಮಕ್ಕಳನ್ನು ಸದಾ ಚೈತನ್ಯದ ಚಿಲುಮೆಯಾಗಿಸಿ
ಆನಂದದಿಂದ ಮೊಗದಲಿ ಮಂದಹಾಸ ಬೀರಿಸಿ.!
ಮಕ್ಕಳ ಕನಸಿಗೆ ಒಪ್ಪುವ ಬಣ್ಣ ಬಳಸಿ
ಬದುಕಲು ಸ್ವತಂತ್ರ ಲೋಕವನ್ನು ಕಲ್ಪಿಸಿ.!
ಮಕ್ಕಳ ಸೃಜನಶೀಲತೆಯನ್ನ ಅಭಿನಂದಿಸಿ
ಪ್ರೀತಿಯ ಹೊಗಳಿಕೆಯಿಂದ ಅಪ್ಪಿ ಸನ್ಮಾನಿಸಿ.!
ನಮ್ಮ ಕನಸಿನ ಮಕ್ಕಳನ್ನ ಪ್ರೀತಿಸಿ
ಭವಿಷ್ಯ ರೂಪಿಸೊ ಬುದ್ಧಿವಂತ ಮೇಧಾವಿಗಳನ್ನಾಗಿಸಿ.!
ಮಕ್ಕಳ ಆಸೆ, ಆಕಾಂಕ್ಷೆ, ಭಾವನೆ, ಆಸಕ್ತಿ, ಅಭಿರುಚಿ, ಮೌಲ್ಯಮಾಪನದ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ.!
ಮಕ್ಕಳ ಮನಸ್ಸು ಸೂಕ್ಷ್ಮ ಮನಸು
ಪ್ರೀತಿ, ಸಹನೆಯಿಂದ ಜ್ಞಾನದ ಬೀಜವ ಬಿತ್ತಿ
ಕಲಿಕೆಯೆಡೆಗೆ ಕುತೂಹಲದಿಂದ ಸೆಳೆಯಿರಿ.!
ಮಕ್ಕಳ ಪ್ರೀತಿ, ನಿಷ್ಕಲ್ಮಶ ಪ್ರೀತಿ
ಮಕ್ಕಳ ತೊದಲ ನುಡಿ, ಕೇಳಲು ಮಧುರ ನುಡಿ.!
"ಇಂದಿನ ಮಕ್ಕಳೇ ನಾಳೆಯ ಸತ್ಪ್ರಜೆಗಳು"
🌺🌺🌺🌺
✍️ಶೃತಿ ಶೈವ
#WritcoQuote#writcoapp#Writer#Writco#shruthishaiva#Writcopoem
#ಮಕ್ಕಳು#ಕನಸು#ಕಲಿಕೆ#ಮನಸ್ಸು
ಮಕ್ಕಳ ಕನಸು ನಗುವಿನ ಮುಗ್ಧ ಮನಸು.!
ಮಕ್ಕಳು ನಮ್ಮ ರಾಷ್ಟ್ರದ ಅಮೂಲ್ಯ ಸಂಪತ್ತು
ಪ್ರತಿಭೆಯ ಗುರುತಿಸಿ ಅಭಿನಂದಿಸಿ ಯಾವತ್ತು.!
ಮಕ್ಕಳು ಅರಳುವ ಸುಂದರ ಹೂವುಗಳು
ಅರಳುವ ಮುನ್ನವೇ ಚಿವುಟದಿರಿ ಕನಸುಗಳು.!
ಮಕ್ಕಳಲ್ಲಿ ಯೋಚಿಸುವ ಮನೋಭಾವ ಬೆಳಸಿ
ಆಸಕ್ತಿ ವಿಷಯಗಳಿಗೆ ನೀರೆರೆದು ಪೋಷಿಸಿ.!
ಕಲಿಕೆಯಲ್ಲಿ ಪ್ರಶ್ನೆಯ ಕುತೂಹಲ ಕೆರಳಿಸಿ
ಜ್ಞಾನದ ಅರಿವನ್ನು ಬಾಲ್ಯದಲ್ಲಿ ಮೂಡಿಸಿ.!
ಜೀವನದಲ್ಲಿ ಕನಸು ಕಾಣಲು ಪ್ರೇರೇಪಿಸಿ
ಕಲಿಕೆಯ ಜೊತೆ ಮುಟ್ಟುವ ಗುರಿ ತಲುಪಿಸಿ.!
ಮಧುರ ಭಾವನೆಗಳನ್ನು ಒಲವಿಂದ ಪ್ರಚೋದಿಸಿ
ಕಾಣುವ ಕಲ್ಪನೆಯ ಲೋಕವನ್ನ ಸೃಷ್ಟಿಸಿ.!
ಮನದ ಆಸೆಗಳನ್ನು ಸಂದರ್ಭಕ್ಕೆ ನೆರವೇರಿಸಿ
ಮುಖಾಮುಖಿ ವಿಚಾರ ವಿನಿಮಯ ಮಾಡಿಸಿ.!
ಸಮಾಜದ ವಾಸ್ತವ ಘಟನೆಗಳ ಬಗ್ಗೆ ವಿವರಿಸಿ
ಸುಂದರ ವ್ಯಕ್ತಿತ್ವ ಗುಣಗಳನ್ನು ರೂಪಿಸಿ.!
ಮಕ್ಕಳಲ್ಲಿ ಪ್ರಯತ್ನ ಮಾಡುವುದನ್ನ ರೂಡಿಸಿ
ಸರಿ ತಪ್ಪುಗಳ ಬಗ್ಗೆ ಅರಿವನ್ನ ತಿಳಿಸಿ.!
ಗುರು ಹಿರಿಯರನ್ನು ಗೌರವಿಸುವುದನ್ನ ಕಲಿಸಿ
ಸಹಾಯ ಮಾಡುವ ಮನೋಗುಣವನ್ನ ವೃದ್ಧಿಸಿ.!
ಮಕ್ಕಳನ್ನು ಸದಾ ಚೈತನ್ಯದ ಚಿಲುಮೆಯಾಗಿಸಿ
ಆನಂದದಿಂದ ಮೊಗದಲಿ ಮಂದಹಾಸ ಬೀರಿಸಿ.!
ಮಕ್ಕಳ ಕನಸಿಗೆ ಒಪ್ಪುವ ಬಣ್ಣ ಬಳಸಿ
ಬದುಕಲು ಸ್ವತಂತ್ರ ಲೋಕವನ್ನು ಕಲ್ಪಿಸಿ.!
ಮಕ್ಕಳ ಸೃಜನಶೀಲತೆಯನ್ನ ಅಭಿನಂದಿಸಿ
ಪ್ರೀತಿಯ ಹೊಗಳಿಕೆಯಿಂದ ಅಪ್ಪಿ ಸನ್ಮಾನಿಸಿ.!
ನಮ್ಮ ಕನಸಿನ ಮಕ್ಕಳನ್ನ ಪ್ರೀತಿಸಿ
ಭವಿಷ್ಯ ರೂಪಿಸೊ ಬುದ್ಧಿವಂತ ಮೇಧಾವಿಗಳನ್ನಾಗಿಸಿ.!
ಮಕ್ಕಳ ಆಸೆ, ಆಕಾಂಕ್ಷೆ, ಭಾವನೆ, ಆಸಕ್ತಿ, ಅಭಿರುಚಿ, ಮೌಲ್ಯಮಾಪನದ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ.!
ಮಕ್ಕಳ ಮನಸ್ಸು ಸೂಕ್ಷ್ಮ ಮನಸು
ಪ್ರೀತಿ, ಸಹನೆಯಿಂದ ಜ್ಞಾನದ ಬೀಜವ ಬಿತ್ತಿ
ಕಲಿಕೆಯೆಡೆಗೆ ಕುತೂಹಲದಿಂದ ಸೆಳೆಯಿರಿ.!
ಮಕ್ಕಳ ಪ್ರೀತಿ, ನಿಷ್ಕಲ್ಮಶ ಪ್ರೀತಿ
ಮಕ್ಕಳ ತೊದಲ ನುಡಿ, ಕೇಳಲು ಮಧುರ ನುಡಿ.!
"ಇಂದಿನ ಮಕ್ಕಳೇ ನಾಳೆಯ ಸತ್ಪ್ರಜೆಗಳು"
🌺🌺🌺🌺
✍️ಶೃತಿ ಶೈವ
#WritcoQuote#writcoapp#Writer#Writco#shruthishaiva#Writcopoem
#ಮಕ್ಕಳು#ಕನಸು#ಕಲಿಕೆ#ಮನಸ್ಸು