...

13 views

ಅಮಲು
ಅಮಲು ಏರಿತ್ತು ಎಲ್ಲವೂ ನನ್ನದೆಂದು
ಇಂದೇಕೋ ಪರಿವಿಲ್ಲದಂತೆ ಮಲಗಿರುವೆನು
ನಾನು ನನ್ನದೆಂದು ಅಹಂಕಾರದಿ ಮೆರೆಯುತ್ತಿದ್ದೆ
ಆದರೇನಾಯಿತೆನಗೀಗ ಕಣ್ಣು ಬಿಡಲಾಗದೆ

ಎನ್ನವರೆದಂರಿಯದೆ ಅಪಹಾಸ್ಯವಗೈದೆ
ಇಂದವರೆನ್ನ ಹತ್ತಿರವಿದ್ದರೂ ಮಾತನಾಡಲಾರೆ
ಜೊತೆಯಾಗಿ ಹುಟ್ಟಿದವರನ್ನು ಲೆಕ್ಕಿಸದೆ ಕೀಳಾಗಿಕಂಡೆ
ಆಸೆ,ಆಕಾಂಕ್ಷೆಗಳ ದಾಸನಾಗಿ ಎಲ್ಲರನ್ನು ಮರೆತ್ತಿದೆನಲ್ಲ

ಈಗೇಕೋ ಎಲ್ಲವ ಮರೆತು ಅಪ್ಪಿಕೊಳ್ಳ ಹೊರಟೆ
ಅಯ್ಯೋ ಯಾರನ್ನು ಮುಟ್ಟಲಾಗದಲ್ಲ ಏನಿದು
ಯಾಕೀಗೆ ಬಂಧುಗಳೆಲ್ಲ ಕಂಡೆನ್ನ ಅಳುತ್ತಿಹರಲ್ಲಾ
ಇಷ್ಟೋಂದು ಸಂಬಂಧಿಕರು ಬಂದಿಹರಲ್ಲಾ

ಚಾಪೆಯ ಮೇಲೆ ಎಂದೂ ಮಲಗಲೇ ಇಲ್ಲವಲ್ಲಾ
ಏನಕ್ಕಾಗಿ ನಾ ಮಲಗಿರುವೆ ಹೀಗೆ ನಿರ್ವಸ್ತ್ರವಾಗಿ
ಬಿಳಿಯ ಬಟ್ಟೆಯ ಹೊದ್ದು ಏನಾಯಿತೆಗೆ
ಹೂವಿನ ಹಾರ,ದೂಪ,ದೀಪಗಳನ್ನೇಕೆ ಹಚ್ಚಿಯರು

ನಾಲ್ವರೆನ್ನ ಏಕೇ ಹೊತ್ತು ಸಾಗುತ್ತಿಹರು
ಕಟ್ಟಿಗೆಯ ಮೇಲೇಕೆನ್ನ ದೇಹವ ಮಲಗಿಸಿಹರು
ಹೋ ಇಹಲೋಕವ ತ್ಯಜಿಸಿಹೆನೇ ನಾನು
ಈ ಆತ್ಮವು ಚಡಪಡಿಸುತ್ತಿದೆಯಲ್ಲವೇ
ಚಿತೆಯ ಅಗ್ನಿಯೊಳು ಉರಿಯುತ್ತಿರಲು
ಎಲ್ಲದರ ಅಮಲೆನ್ನ ಬಿಟ್ಟು ಚಿತೆಗೆ ಭಸ್ಮವಾಯಿತೆ