ಹೆಣ್ಣಿನ ವರ್ಣನೆ
ಕೆಂದಾವರೆ ಮೊಗದ ಚೆಲುವೆಯೆ
ನಿನಗೆ ಸರಿಸಾಟಿ ಯಾರಿಲ್ಲವೇ!
ಜರತಾರಿ ಸೀರೆಯುಟ್ಟ ನಾರಿಯೆ
ಮೆರುಗು ತಂದಿಹೆ ಹಣೆಯ ಸಿಂಧೂರಕೆ,
ಕಣ್ಣಿಗೆ ಕಾಡಿಗೆ ಹಚ್ಚಿದ ಕೋಮಲಾಂಗಿಯೆ
ಕೈ ಬಳೆ ಸದ್ದಿಗೆ ನಾ ಬೆರಗಾಗಿರುವೆ,
ನವಿಲು ಗರಿಯಂತೆ ಕಾಣೊ ಓಲೆಯೆ
ನರ್ತಿಸಿ ಸ್ಪರ್ಶಿಸುವೆ ನನ್ನವಳ ಕೆನ್ನೆಗೆ,
ಕೊರಳ ಬಳಸಿರುವ ಸುವರ್ಣವೆ
ಹೊಳಪು ನೀಡುವೆ ನನ್ನ ಪ್ರೇಯಸಿಗೆ,
ಕಾಲ್ಗೆಜ್ಜೆ ಮಾಡಿದ ಸ್ವರ ನಾದಕೆ
ಹೃದಯವು ತಲ್ಲಣಿಸಿದೆ ನಿನ್ನಂದಕೆ!
ಮಾದಕ ಮುಗುಳ್ನಗೆ ಬೀರಿದ ತುಟಿಯೇ
ನನ್ನಾಕರ್ಷಿಸಿ ನಿನ್ನತ್ತ ಬರ ಸೆಳೆದಿಹೆ,
ನಿನ್ನ ಸೌಂದರ್ಯ ಕಣ್ತುಂಬಿಕೊಂಡು
ಕಣ್ಮುಂಚಿ ನೋಡುವೆ ನಾ ಮನದಲ್ಲೆ
ಓ ಸಖಿಯೇ ನಿನ್ನ ರೂಪ ಲಾವಣ್ಯ
ಬಣ್ಣಿಸಲು ನನಗೆ ಸಾಧ್ಯವೇ!
✍️ಶೃತಿ ಶೈವ
#WritcoQuote#writcoapp#Writer#Writco#shruthishaiva#Writcopoem#ಹೆಣ್ಣಿನವರ್ಣನೆ#ಹೆಣ್ಣು#ಸೌಂದರ್ಯ
ನಿನಗೆ ಸರಿಸಾಟಿ ಯಾರಿಲ್ಲವೇ!
ಜರತಾರಿ ಸೀರೆಯುಟ್ಟ ನಾರಿಯೆ
ಮೆರುಗು ತಂದಿಹೆ ಹಣೆಯ ಸಿಂಧೂರಕೆ,
ಕಣ್ಣಿಗೆ ಕಾಡಿಗೆ ಹಚ್ಚಿದ ಕೋಮಲಾಂಗಿಯೆ
ಕೈ ಬಳೆ ಸದ್ದಿಗೆ ನಾ ಬೆರಗಾಗಿರುವೆ,
ನವಿಲು ಗರಿಯಂತೆ ಕಾಣೊ ಓಲೆಯೆ
ನರ್ತಿಸಿ ಸ್ಪರ್ಶಿಸುವೆ ನನ್ನವಳ ಕೆನ್ನೆಗೆ,
ಕೊರಳ ಬಳಸಿರುವ ಸುವರ್ಣವೆ
ಹೊಳಪು ನೀಡುವೆ ನನ್ನ ಪ್ರೇಯಸಿಗೆ,
ಕಾಲ್ಗೆಜ್ಜೆ ಮಾಡಿದ ಸ್ವರ ನಾದಕೆ
ಹೃದಯವು ತಲ್ಲಣಿಸಿದೆ ನಿನ್ನಂದಕೆ!
ಮಾದಕ ಮುಗುಳ್ನಗೆ ಬೀರಿದ ತುಟಿಯೇ
ನನ್ನಾಕರ್ಷಿಸಿ ನಿನ್ನತ್ತ ಬರ ಸೆಳೆದಿಹೆ,
ನಿನ್ನ ಸೌಂದರ್ಯ ಕಣ್ತುಂಬಿಕೊಂಡು
ಕಣ್ಮುಂಚಿ ನೋಡುವೆ ನಾ ಮನದಲ್ಲೆ
ಓ ಸಖಿಯೇ ನಿನ್ನ ರೂಪ ಲಾವಣ್ಯ
ಬಣ್ಣಿಸಲು ನನಗೆ ಸಾಧ್ಯವೇ!
✍️ಶೃತಿ ಶೈವ
#WritcoQuote#writcoapp#Writer#Writco#shruthishaiva#Writcopoem#ಹೆಣ್ಣಿನವರ್ಣನೆ#ಹೆಣ್ಣು#ಸೌಂದರ್ಯ