...

13 views

ನಮ್ಮ ಸಂಕ್ರಾಂತಿ
ವರ್ಷದ ಮೊದಲ ಹಬ್ಬ ಸಂಕ್ರಾಂತಿ
ಎಳ್ಳು ಬೆಲ್ಲ ಹಂಚುವ ಪದ್ಧತಿ
ನೆರೆ ಹೊರೆಯವರು ಕೂಡಿ ಆಚರಿಸುವ ವದಂತಿ
ನೋವು ನಲಿವುಗಳು ಹಂಚಿಕೊಳ್ಳುವ ಸಂಗತಿ
ಎಲ್ಲಾ ಜನರ ಮನಸ್ಸಿಗೆ ಸಿಗಲಿ ಸುಖ ಶಾಂತಿ

ಕನ್ನಡ ಜನರ ಸುಗ್ಗಿ
ಹರುಷ ದಿಂದ ಕುಣಿವರು ಹಿಗ್ಗಿ ಹಿಗ್ಗಿ

ಹೊಸ ಬಟ್ಟೆಗಳನ್ನು ಧರಿಸಿ ಆಚರಿಸಿ
ಮನೆಗೆ ತಳಿರು ತೋರಣ ಗಳಿಂದ ಸಿಂಗರಿಸಿ
ದೇವರನ್ನು ನಾನಾ ಬಗೆಯ ಹೂವುಗಳಿಂದ ಶೃಂಗರಿಸಿ
ಹಬ್ಬ ಅಡಿಗೆಗಳನ್ನು ಮಾಡಿ ವಿಜೃಂಭಿಸಿ
ಸಂತೋಷ ದಿಂದ ಪರಸ್ಪರ ಜನರನ್ನು ಪ್ರೀತಿಸಿ

ಕಬ್ಬಿನ ರುಚಿಯನ್ನು ಸವಿಯೋಣ
ಬೆಲ್ಲದ ಹಚ್ಚಿನಂತೆ ಸಿಹಿಯಾಗಿ ಮಾತಾಡೋಣ
ಎಲ್ಲರೂ ಜೊತೆಗೆ ಒಂದಾಗೋಣ
ಹಿಂದಿನ ಪದ್ಧತಿಯಂತೆ ಬಾನಿಗೆ ಗಾಳಿಪಟವನ್ನು ಹಬ್ಬದ ದಿನದಂದು ಹಾರಿಸೋಣ
ನಾವೆಲ್ಲರೂ ಒಂದೇ ಎಂಬ ಸಾರ್ಥಕಥೆ ಸಾರೋಣ

ಜನರ ನಡುವೆ ಸಮಯ ವಿರದ ಪರಿಸ್ಥಿತಿ
ನಮ್ಮ ಈಗಿನ ಪ್ರಪಂಚದ ಸ್ಥಿತಿ

ಕಹಿ ನೆನಪುಗಳೆಲ್ಲ ಮರೆಯಾಗಲಿ
ಸಿಹಿ ನೆನಪುಗಳು ಉಳಿಯಲಿ
ಅಂದುಕೊಂಡಿದ್ದ ಪ್ರಾಥನೆಗಳು ಆ ದೇವರು ಒದಗಿಸಲಿ
ಮನಸ್ಸಿಗೆ ನೆಮ್ಮದಿ ಸಿಗಲಿ
ಎಲ್ಲಾ ಜನರ ಬಾಳು ಹಸನಾಗಲಿ
ಜನರ ನಡುವೆ ಬಾಂಧವ್ಯ ಮರುಕಳಿಸಲಿ

ಗಗನ ಜಿ ಎ

# ಕನ್ನಡ # ನಮ್ಮ ಹಬ್ಬ # ಸಂಕ್ರಾಂತಿ # ಸಿಹಿ # ಪ್ರೀತಿ # ಬಾಂಧವ್ಯ #

© All Rights Reserved